Cinemaಯ ರೀತಿಯಲ್ಲಿ ಕುರಿ ಕಳ್ಳರ ಬೆನ್ನು ಹತ್ತಿದ ಕುರಿಗಾರರು.

ರಾಯಚೂರು : ಕುರಿಗಳನ್ನು ಕಳವು ಮಾಡುತ್ತಿರುವ ಕಳ್ಳರನ್ನು ಸಿನಿಮಾ ರೀತಿಯಲ್ಲಿ ಬೆನ್ನು ಹತ್ತಿ ಕುರಿಗಳ ಕಳ್ಳರನ್ನು ಹಿಡಿದಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದಿದೆ.

ಬೇರೆ ಬೇರೆ ಪ್ರದೇಶಗಳಿಂದ ಮೇವನ್ನು ಹರಸಿ ನದಿ ಭಾಗಗಳ ಮತ್ತು ನೀರಾವರಿ ಪ್ರದೇಶಗಳ ಕಡೆ ಕುರಿ ಮೇಯಿಸಲು ಕುರಿಗಳನ್ನು ಒಡೆದುಕೊಂಡು ಬರುತ್ತಾರೆ. ಇದನ್ನು ಹರಿತ ಕಳ್ಳರು ರಾತ್ರಿಯ ಸಮಯದಲ್ಲಿ ಕುರಿಗಳನ್ನು ಕಳವು ಮಾಡಿ, ಅವುಗಳನ್ನು ಸಂತೆಯಲ್ಲಿ ಮಾರುತ್ತಿದ್ದರು.

ಕಳೆದ ಎರಡು ವರ್ಷಗಳಿಂದ ಮುದಗಲ್ ಭಾಗದಲ್ಲಿ ಇದೇ ರೀತಿಯಲ್ಲಿ ಅನೇಕ ಕುರಿಗಳನ್ನು ಕಳ್ಳವು ಮಾಡುತ್ತಿದ್ದರು. ಇದನ್ನೆ ರೂಡಿ ಮಾಡಿಕೊಂಡ ಕಳ್ಳರ ಗುಂಪು ಮತ್ತೆ ರಾತ್ರೋರಾತ್ರಿ ಕುರಿ,ಮೇಕೆ ಕಳ್ಳತನ ಮಾಡಲು ಬಂದಾಗ ಖದಿಮರು ಸಿಕ್ಕಾಕಿಕೊಂಡಿದ್ದಾರೆ. ಕಳ್ಳತನಕ್ಕೆ ಖದಿಮರು ಬುಲೆರೋ ಗಾಡಿ ಬಳಸುತ್ತಿದ್ದರು.

ಕೇಲವು ದಿನಗಳಿಂದ ಬೇಸತ್ತ ಕುರುಬರು ಕಳ್ಳರಿಗಾಗಿ ಹೊಂಚು ಹಾಕಿ ಕುಳಿತ್ತಿದ್ದರು. ಅದನ್ನು ಹರಿಯದ ಕಳ್ಳರು ಕುರಿಕಳವು ಮಾಡಲು ಬಂದು ಸಿಕ್ಕಾಕಿಕೊಂಡಿದ್ದಾರೆ. ಕುರಿಗಳನ್ನು ಕಳವು ಮಾಡಲು ಖದೀಮರು ಬಳಸಿದ ವಾಹನ ಬುಲೆರೋ.

ಅದನ್ನು ಹಿಡಿದಿದ್ದು ರೋಚಕ ಕಥೆ ಏನಂದರೆ ಕುರಿಗಳನ್ನು ಕಳವು ಮಾಡಿದ ಖದೀಮರು ಬುಲೆರೋ ಮೂಲಕ ಕುರಿಗಳನ್ನು ಸಾಗಿಸುತ್ತಿದ್ದರು. ಬುಲೆರೋವನ್ನು ಬೆನ್ನತ್ತಿದ ಕುರುಬರು  ಸಿನಿಮಾ ರೀತಿಯಲ್ಲಿ ಕುರಿ ಗಳ್ಳರನ್ನು ಹಿಡಿದಿದ್ದಾರೆ.

ಆದರೆ ಕುರಿಗಾರರು ಬೆನ್ನು ಹತ್ತಿದ್ದುನ್ನು ಗಮನಿಸಿ ವಾಹನ ನಿಲ್ಲಿಸಿ ಎಸ್ಕೇಪ್ ಆಗಿರೋ ಖದೀಮರು. ಬುಲೆರೋ ವಾಹನವನ್ನ ಜಾಲಿಗಿಡದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಬುಲೆರೋ ವಾಹನದಲ್ಲಿದ್ದ ಒಂದು ಟಗರು ರಕ್ಷಿಸಿದ ಕುರಿಗಾರರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ ಮುದಗಲ್ ಪೊಲೀಸರು. ಕಳ್ಳರು ಬಳಸಿದ್ದ ಬುಲೆರೋ ವಾಹನವನ್ನು ಮುದಗಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

About The Author