ರಾಷ್ಟ್ರಗೀತೆಗೆ (National Anthem) ಅಗೌರವ ತೋರಿರುವ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗೆ ಮಾರ್ಚ್ 2 ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈನ ಮಜಂಗಾವ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ (Magistrate Court summons issued)ಮಾಡಿದೆ. 1971 ರ ಸೆಕ್ಷನ್ 3 ರ ರಾಷ್ಟ್ರೀಯತೆಗೆ ಅವಮಾನ ತಡೆ ಕಾಯ್ದೆ(Shame on Nationality Act)ಯಡಿಯಲ್ಲಿ ಬಿಜೆಪಿಯ ಕಾರ್ಯಕಾರಿ, ವಕೀಲ ವಿವೇಕಾನಂದ ಗುಪ್ತಾ (Advocate Vivekananda Gupta) ದೂರು ದಾಖಲಿಸಿ, ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು. ಕಳೆದ ಡಿಸೆಂಬರ್ ನಲ್ಲಿ ಲೇಖಕ ಜಾವೇದ್ ಅಕ್ತರ್ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆ ಆರಂಭವಾದಾಗ ಎದ್ದುನಿಲ್ಲದೆ ಕುಳಿತಿದ್ದು, ನಂತರ ಎದ್ದು ನಿಂತು ಎರಡು ಸಾಲುಗಳನ್ನು ಹಾಡಿ ನಿಲ್ಲಿಸಿದರು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು, ಈ ಕುರಿತಂತೆ ವಿವೇಕಾನಂದ ಗುಪ್ತಾ ನ್ಯಾಯಾಲಕ್ಕೆ ದೂರು ನೀಡಿದ್ದರು. ದೂರಿನಲ್ಲಿ ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವ ತೋರಿದ್ದು, ಅಲ್ಲಿಂದ ತಕ್ಷಣವೇ ನಿರ್ಗಮಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಮುಂಬೈನ ಮಜಂಗಾವ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಮತಾ ಬ್ಯಾನರ್ಜಿಗೆ ಸಮನ್ಸ್ ಜಾರಿ ಮಾಡಿದೆ.




