Raichur : ಇಲ್ಲಿ ನಡಿತಿದೆ ಪರ್ಸೆಂಟೇಜ್ ಕಮಿಷನ್ ದಂಧೆ..!

ರಾಯಚೂರು : ರಾಯಚೂರು ಜಿಲ್ಲೆಯ ಪಂಚಾಯ್ತಿಗಳಲ್ಲಿ ನಡಿತಿದೆ ಖುಲ್ಲಂ ಖುಲ್ಲ ಕಮಿಷನ್ ದಂಧೆ. ಪಿಡಿಓ(pdo), ಅದ್ಯಕ್ಷ, ಜೆಇ (je), ಇಓ (eo) ಹಾಗೂ ಸಿಇಓ (ceo) ಗೂ ಕೊಡಬೇಕಂತೆ ಕಮಿಷನ್. ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ (Musky taluk of Raichur district) ತೋರಣದಿನ್ನಿ ಗ್ರಾಮ ಪಂಚಾಯತಿ ಯಲ್ಲಿ.ಇನ್ನೂ ಪಿಡಿಓ ಕೃಷ್ಣ (PDO Krishna) ಎಂಬುವವರು. ಎಲ್ಲರಿಗೂ ಇಂತಿಷ್ಟು ಕಮಿಷನ್ ಎಂದು ಫಿಕ್ಸ್ ಆಗಿದೆ. ಕಮಿಷನ್ ಕೊಡದೇ ಇದ್ರೆ ಇಲ್ಲಿ ಯಾವುದೇ ಕಾಮಗಾರಿಯ ಬಿಲ್ ಆಗೋದೇ ಇಲ್ಲವಂತೆ, ಹಾಗೆ ಈ ಗ್ರಾಮ ಪಂಚಾಯತಿ  ಗಾಂಧಿ ಗ್ರಾಮ ಪುರಸ್ಕಾರ (Gandhi village award) ಪಡೆದ ಗ್ರಾಮ ಪಂಚಾಯ್ತಿ ಆಗಿದ್ದು ಎಲ್ಲರಿಗೂ ಕೊಟ್ಟ ಮೇಲೆ ನನಗೆ ಒಂದೇ ಪರ್ಸಂಟೇಜ್ (Personage) ಉಳಿಯುತ್ತೆ ಎಂದು ಮಾತನಾಡ್ತಿರೋ ಪಿಡಿಓ ಕೃಷ್ಣ. ಯಾವುದೇ ಕಾಮಗಾರಿ ಮಾಡಿದ್ರೂ ಪಿಡಿಓ, ಅದ್ಯಕ್ಷ, ಜೆಇ, ಇಓ ಹಾಗೂ ಸಿಇಓ ಗೆ ಸೇರಿ 30-35 ಕಮಿಷನ್ ಕೊಡಬೇಕು ಎಂದು ಪಿಡಿಓ ಅವರ ಮಾತು. ಇಲ್ಲದಿದ್ರೆ ನೂರಾರು ಕಾರಣ ಹೇಳಿ ಬಿಲ್ ತಡೆ ಹಿಡಿತಾರೆ ಪಿಡಿಓ ಎಂದು ಆರೋಪ ಮಾಡುತ್ತರೆ ಗುತ್ತೆದಾರರು. ಇದು ಒಂದ್ ಉದಾಹರಣೆ ಅಷ್ಟೇ, ಇಡೀ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡಿತಿದೆ ಕಮಿಷನ್ ದಂಧೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.

About The Author