ಇದೇ ವಾರ ಬಿಡುಗಡೆಯಾಗುತ್ತಿದೆ ವಿಭಿನ್ನ ಕಥಾಹಂದರದ “ಇದೇ ಅಂತರಂಗ ಶುದ್ಧಿ”

ಕೊರೋನ ಕರಿನೆರಳು ದೂರವಾಗುತ್ತಿದೆ. ಚಿತ್ರರಂಗದಲ್ಲಿ ಸಂಭ್ರಮದ ನಗೆ ಮೂಡುತ್ತಿದೆ. ಸರ್ಕಾರದಿಂದ ಚಿತ್ರಮಂದಿರದಲ್ಲಿ ನೂರರಷ್ಟು ಭರ್ತಿಗೆ ಅವಕಾಶವೂ ಸಿಕ್ಕಿದೆ.

ಇಂತಹ ಸುಸಂದರ್ಭದಲ್ಲಿ ಅಭಿನವ್ ಸ್ಟುಡಿಯೋಸ್ ಲಾಂಛನದಲ್ಲಿ ಅಭಿಲಾಷ್ ಚಕ್ಲಾ ಹಾಗೂ ನವಾಜಿತ್ ಬಲ್ಲರ್ ನಿರ್ಮಿಸಿರುವ “ಇದೇ ಅಂತರಂಗ ಶುದ್ಧಿ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕುಮಾರ ದತ್ ನಿರ್ದೇಶಿಸಿದ್ದಾರೆ.

ಕಥೆ ಯ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಂತರಂಗ ಶುದ್ಧಿ. ಅಂದರೆ ಮನುಷ್ಯನ ಮನಸ್ಸು ಶುದ್ದಿ ಮಾಡುವಂತ ಕೆಲಸ.. ಈ ದಿನದ ಜೀವನ ಶೈಲಿ ಹಾಗೂ ಅವಸರದ ಬದುಕಿನ ಮಧ್ಯ ಪ್ರೀತಿ ಪ್ರೇಮ… ಭಾವನೆಗಳು ಮತ್ತು ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ ಈ ಚಿತ್ರ.. ಎಲ್ಲೋ ಒಂದುಕಡೆ ಮನುಷ್ಯ ತನ್ನ ತಾನು ಕಳೆದುಕೊಂಡು ಸಾಗುತ್ತಿರುವಾಗ.. ತಾನೇ ತನ್ನ ಕಣ್ಣೆದುರು ಸನ್ನಿವೇಶಗಳ ಮೂಲಕ ಇಲ್ಲಾ ಕೆಲವು ಬದುಕಿನಲ್ಲಿ ಪಾಠ ದಂತೆ ಬಂದು ಹೋಗೋ ಘಟನೆಗಳ ಮೂಲಕ ಕಲಿಯುವ ಪಾಠವೂ ಈ ಚಿತ್ರದಲ್ಲಿದೆ.
ಜೀವನ ವೆ ಒಂದು journey.. ಒಬ್ಬೊಬ್ಬರು ಒಂದೊಂದು ರೀತಿ ಕನಸು, ಅನುಭವ, ಆಸೆ, ಗುರಿ, ಕಾಯಕ ಹೊತ್ತು ಸಾಗುತ್ತಾರೆ.. ಆ ಜರ್ನಿ ಮಧ್ಯೆ ಅವರು ಯಾರುಯಾರನ್ನು ಭೇಟಿ ಆಗುತ್ತಾರೆ. ಏನೇನೂ ಆಗತ್ತೆ… ಏನೆಲ್ಲಾ ನಡಿಯತ್ತೆ ಎಂಬುದು ಈ ಚಿತ್ರದ ಕಥಾ ಹಂದರ ಎನ್ನುತ್ತಾರೆ ನಿರ್ದೇಶಕರು.

ಲವ್ ಪ್ರಾಣ್ ಮೆಹ್ತಾ ಸಂಗೀತ ನೀಡಿರುವ ಹಾಡಿಗಳು ಸುಮಧುರವಾಗಿವೆ. ಚಿತ್ರದ ಟ್ರೇಲರ್ ಸಹ ಭಾರಿ ಸದ್ದು ಮಾಡಿದೆ. ವಿನಯ್ ಹೊಸಗೌಡರ್ ಛಾಯಾಗ್ರಹಣ ಹಾಗೂ ಸುಪ್ರೀತ್ ಅವರ ಸಂಕಲನ ಈ ಚಿತ್ರಕ್ಕಿದೆ.

ಆರ್ಯವರ್ಧನ್ ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರತಿಭ, ಶ್ವೇತ, ರೂಪೇಶ್, ಶ್ರೀಧರ್, ಸೂರಜ್, ರಘು, ಪುನೀತ್, ಮಂಜುಳಾರೆಡ್ಡಿ‌ ಮುಂತಾದವರಿದ್ದಾರೆ.

About The Author