Wednesday, January 22, 2025

Latest Posts

Pro Kabaddi : ಬೆಂಗಾಲ್​ ವಾರಿಯರ್ಸ್ ವಿರುದ್ಧ ತೆಲುಗು ಟೈಟನ್ಸ್ ಗೆಲ್ಲುತ್ತಾ..!

- Advertisement -

ಪ್ರೊ ಕಬಡ್ಡಿ ಸೀಸನ್ 8(Pro Kabaddi Season 8)ರಲ್ಲಿ  ಕಳಪೆ ಪ್ರದರ್ಶನ ತೋರಿರುವ ತೆಲುಗು ಟೈಟನ್ಸ್ (Telugu Titans) ತಂಡ  ಇಲ್ಲಿಯವರೆಗೂ  16 ಪಂದ್ಯಗಳನ್ನು ಆಡಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು ಕೊನೆಯ ಸ್ಥಾನದಲ್ಲಿದೆ. ತೆಲುಗು ಟೈಟನ್ಸ್ ವಿರುದ್ಧ ಬೆಂಗಾಲ್​ ವಾರಿಯರ್ಸ್ (Bengal Warriors against Telugu Titans) ತಂಡ ಸೆಣಸಾಡಲಿದೆ. ಇನ್ನೂ ಈ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇಂದು ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ಮತ್ತು ಪಿಂಕ್ ಪ್ಯಾಂಥರ್ಸ್​​​ (Gujarat Giants and Pink Panthers) ತಂಡಗಳು ಸೆಣಸಾಟ ನಡೆಸಿಲಿವೆ. ದ್ವಿತೀಯ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಸೆಣಸಾಟ ನಡೆಸಲಿವೆ. ಗುಜರಾತ್​​ ಜೈಂಟ್ಸ್ ತಂಡ ಒಟ್ಟು 16 ಪಂದ್ಯಗಳನ್ನಾಡಿದ್ದು, 6 ಪಂದ್ಯ ಗೆದ್ದು, 7ರಲ್ಲಿ ಸೋಲು ಕಂಡಿದೆ. 43 ಅಂಕಗಳೊಂದಿಗೆ 9ನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ಪಿಂಕ್​ ಪ್ಯಾಂರ್ಥಸ್​ ತಂಡ ಆಡಿರುವ 16 ಪಂದ್ಯದಲ್ಲಿ 7ರಲ್ಲಿ ಗೆದ್ದು . 46 ಅಂಕಗಳಿಸಿ 7ನೇ ಸ್ಥಾನದಲ್ಲಿದೆ. ಬೆಂಗಾಲ್​ ವಾರಿಯರ್ಸ್ ಒಟ್ಟು 17 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದಿದೆ. 9 ಪಂದ್ಯಗಳನ್ನು ಸೋತಿದ್ದು, 41 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ 11ನೇ ಸ್ಥಾನದಲ್ಲಿದೆ. ತೆಲುಗು ಟೈಟನ್ಸ್​  ಟೂರ್ನಿ ಆರಂಭದಿಂದ ಇಲ್ಲಿಯವರೆಗೂ 16 ಪಂದ್ಯಗಳನ್ನಾಡಿದ್ದು, ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿ. ಇನ್ನೂ ಈ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಗೆಲ್ಲುವ ಸ್ಥಾನದಲ್ಲಿದೆ.

- Advertisement -

Latest Posts

Don't Miss