- Advertisement -
ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ (K S Eshwarappa) ಮಾತನಾಡಿ ಮಾಜಿ ಸಚಿವ ಹಾಗೂ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (Renukacharya) ನಡುವೆ ಅನ್ಯೋನ್ಯ ಸಂಬಂಧವಿದೆ. ದಾವಣಗೆರೆ (Davangere)ಯಲ್ಲಿ ಸುದ್ದಿಗಾಗರೊಂದಿಗೆ ಮಾತಾಡಿದ ಅವರು ರೇಣುಕಾಚಾರ್ಯ ಪರ ಬ್ಯಾಟ್ ಮಾಡಿದರು. ಎಲ್ಲ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲಾಗದು, ಅದರೆ ಹಿಂದೆ ಸಚಿವರಾಗಿ ಅನುಭವ ಇರುವ ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರಾಗಿರುವುದರಿಂದ ಅವರಿಗೆ ನೀಡಬೇಕು ಎಂದು ಈಶ್ವರಪ್ಪ ಹೇಳಿದರು. ಆದರೆ ಮುಂದಿನ ಬಾರಿ ಸರ್ಕಾರ ರಚನೆಯಾಗುವಾಗ ಈ ಗೊಂದಲವಿರಲಾರದು ಯಾಕೆಂದರೆ ತಮ್ಮ ಪಕ್ಷವೇ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ಈಶ್ವರಪ್ಪ ಹೇಳಿದರು. ಯುವಕರಿಗೆ ಆದ್ಯತೆ ನೀಡಿ ಅನ್ನುವ ಕೂಗು ಮತ್ತು ಆಗ್ರಹ ಬಲಗೊಳ್ಳುತ್ತಿದೆ. ಈಶ್ವರಪ್ಪ ಅವರನ್ನು ಪಕ್ಷದ ಸಂಘಟನಾ ಕಾರ್ಯದಲ್ಲಿ ಉಪಯೋಗಿಸಿಕೊಳ್ಳಬೇಕು ಅಂತ ವರಿಷ್ಠರು ತೀರ್ಮಾನಿಸಿದಂತಿದೆ.
- Advertisement -