ಹಿಜಾಬ್ ವಿವಾದ (Hijab Controversy) ಈಗ ರಾಜ್ಯದಾದ್ಯಂತ ಭಾರೀ ವಿವಾದವನ್ನು ಉಂಟುಮಾಡಿದ್ದು, ಈಗ ಅದು ತಾರಕಕ್ಕೇರಿದೆ. ರಾಜಕೀಯದ ರಾಜಕಾರಣಿಗಳು ಇದನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು, ಹಲವಾರು ರಾಜಕಾರಣಿಗಳು ಹಲವಾರು ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಈಗ ಈ ವಿವಾದ ಕೋರ್ಟ್ ನಲ್ಲಿ ಇದ್ದು (The dispute is in court), ಇಂದು ತೀರ್ಮಾನ ಪ್ರಕಟವಾಗಲಿದೆ. ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯ ಎಂದು ಸುತ್ತೋಲೆ ಹೊರಡಿಸಿದೆ. ಆದರೆ ರಾಜ್ಯದಲ್ಲಿ ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ (Dharani wearing saffron shawl and hijab) ಧರಣಿಯನ್ನು ಸಹ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ (Education Minister BC Nagesh) ಧರಣಿಯಲ್ಲಿ ಪಾಲ್ಗೊಂಡವರಿಗೆ ಹಾಜರಾತಿ ನೀಡುವುದಿಲ್ಲ, ಹಾಜರಾತಿ ನೀಡದಿದ್ದಲ್ಲಿ ಪಿಯು ಮುಖ್ಯ ಪರೀಕ್ಷೆಗೆ ಅವಕಾಶವಿಲ್ಲ(PU Main Examination not allowed)ವೆಂದು ಹೇಳಿದ್ದಾರೆ.