Friday, December 27, 2024

Latest Posts

ಈ ವಾರ ಬಿಡುಗಡೆಯಾಗುತ್ತಿದೆ ವಿಭಿನ್ನ ಕಥೆಯ “ಭಾವಚಿತ್ರ”

- Advertisement -

ಮೊಬೈಲ್ ಬಂದ ಮೇಲಂತೂ ಎಲ್ಲರ ಬಳಿ ಕ್ಯಾಮರಾ ಇದ್ದೆ ಇದೆ. ಈ ಕ್ಯಾಮೆರಾ ಮೂಲಕ ಸಾಗುವ ಕಥೆಯೆ ” ಭಾವಚಿತ್ರ “.
ಇದೇ ಹದಿನೆಂಟನೇ ತಾರೀಖು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ವಿಭಿನ್ನ ಕಥೆ ಹೊಂದಿರುವ ಚಿತ್ರ ನಮ್ಮ ” ಭಾವಚಿತ್ರ”. ಈಗ ಎಲ್ಲರ ಬಳಿ ಮೊಬೈಲ್ ನಲ್ಲಿ ಕ್ಯಾಮೆರಾ ಇರುತ್ತದೆ. ಆ ಕ್ಯಾಮೆರಾ ಮೂಲಕ ವಿಭಿನ್ನ ಕಥೆ ಹೇಳಿದ್ದೀ‌ನಿ. ಇದೇ ಹದಿನೆಂಟನೆಯ ತಾರೀಖು ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರತಂಡದ ಸಹಕಾರವೇ ಮುಖ್ಯ. ಎಲ್ಲರಿಗೂ ಹಿಡಿಸುವ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಗಿರೀಶ್ ಕುಮಾರ್.

ವಿಭಿನ್ನ ಕಥೆಯ ಮೂಲಕ ಉತ್ತಮ ಚಿತ್ರವೊಂದನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕರು. ನನ್ನ ಪಾತ್ರ‌ ಕೂಡ ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಚಕ್ರವರ್ತಿ.

ಇದು ನನ್ನ ಅಭಿನಯದ ಮೊದಲ ಸಿನಿಮಾ. ಪ್ರಥಮ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದೀನಿ. ಆರ್ಕಲಾಜಿಸ್ಟ್ ಪಾತ್ರ ನಿರ್ವಹಣೆ ಮಾಡಿದ್ದೀನಿ. ನನ್ನ ಪಾತ್ರ ಹಾಗೂ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂದು ಅಂದುಕೊಂಡಿದ್ದೀನಿ ಎಂದರು‌ ನಾಯಕಿ ಗಾನವಿ ಲಕ್ಷ್ಮಣ್.

ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು‌ ಮಾಡಿದ್ದಾರೆ. ಚಿತ್ರ ನೋಡಿ ನನಗಂತೂ ಖುಷಿಯಾಗಿದೆ. ಪ್ರೇಕ್ಷಕರು ಮೆಚ್ಚುತ್ತಾರೆ‌ ಎಂದು ಚಿತ್ರಕ್ಕೆ ಹಣ ಹೂಡಿರುವ ವಿನಾಯಕ ನಾಡಕರ್ಣಿ ತಿಳಿಸಿದರು.

ಸಂಗೀತದ ಬಗ್ಗೆ ಗೌತಮ್ ಶ್ರೀವತ್ಸ, ಛಾಯಾಗ್ರಹಣದ ಕುರಿತು ಅಜಯ್ ಕುಮಾರ್, ಚಿತ್ರದಲ್ಲಿ ನಟಿಸಿರುವ ಗಿರೀಶ್ ಬಿಜ್ಜಳ್ “ಭಾವಚಿತ್ರ” ದ ಬಗ್ಗೆ ಮಾತನಾಡಿದರು.

ಚಕ್ರವರ್ತಿ, ಗಾನವಿ ಲಕ್ಷ್ಮಣ್, ಅವಿನಾಶ್, ಗಿರೀಶ್ ಕುಮಾರ್, ಗಿರೀಶ್ ಬಿಜ್ಜಳ್, ಕಾರ್ತಿ, ವಿನಾಯಕ ನಾಡಕರ್ಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ

- Advertisement -

Latest Posts

Don't Miss