99,99,999 ಮೂರ್ತಿಗಳಿರುವ ಸ್ಥಳವಿದು.. ಏನಿದರ ರಹಸ್ಯ..?

ಭಾರತದಲ್ಲಿ ಹಲವಾರು ರಹಸ್ಯಮಯ ಸ್ಥಳಗಳಿದೆ. ಅಂಥ ಸ್ಥಳಗಳಲ್ಲಿ ಇಂದು ನಾವು ಉನಾಕೋಟಿ ಎಂಬ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇಲ್ಲಿ,, 99,99,999 ಮೂರ್ತಿಗಳಿದೆ. ಅಷ್ಟು ಮೂರ್ತಿಗಳು ಅಲ್ಲಿ ಇರೋದಾದ್ರೂ ಯಾಕೆ..? ಆ ಮೂರ್ತಿಗಳ ಹಿನ್ನೆಲೆ ಏನು..? ಇವೆಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ..

ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಈ ಉನಾಕೋಟಿ ಎಂಬ ಸ್ಥಳವಿದೆ. ಅಲ್ಲಿ ಒಂದು ಕೋಟಿಗೆ ಒಂದು ಕಡಿಮೆ, ಅಂದ್ರೆ 99 ಲಕ್ಷದ, 99 ಸಾವಿರದ ಒಂಬೈನೂರಾ 99 ಕಲ್ಲಿನ ಮೂರ್ತಿಗಳಿದೆ. ಕೆಲ ಕಥೆಗಳ ಪ್ರಕಾರ ಇದು, ನಿರ್ಮಾಣ ಮಾಡಿದ ಮೂರ್ತಿಗಳಲ್ಲ. ಬದಲಾಗಿ ಇದು ಶಾಪಗ್ರಸ್ತ ಮೂರ್ತಿಗಳು. ಯಾಕಂದ್ರೆ ಇದು ಇರೋದು ದಟ್ಟ ಕಾಡುಗಳ ಮಧ್ಯೆ. ಇಂಥ ಜಾಗದಲ್ಲಿ ಮೊದಲು ಯಾರೂ ಓಡಾಡುತ್ತಿರಲಿಲ್ಲ. ಈಗ ಇದು ಪ್ರವಾಸಿ ತಾಣವಾಗಿರುವ ಕಾರಣ, ಇಲ್ಲಿ ರಸ್ತೆಗಳನ್ನು, ಓಡಾಡಲು ಜಾಗಗಳನ್ನು ಮಾಡಲಾಗಿದೆ.

ಇನ್ನು ಕಥೆಗಳ ಪ್ರಕಾರ, ಶಿವ ಕೊಟ್ಟ ಶಾಪದಿಂದ 99,99,999 ಜನ ಕಲ್ಲಿನ ಮೂರ್ತಿಗಳಾಗಿದ್ದಾರಂತೆ. ಒಮ್ಮೆ ಶಿವ ಸೇರಿ ಒಂದು ಕೋಟಿ ದೇವಿ ದೇವತೆಗಳೊಂದಿಗೆ, ಯಾವುದೋ ಒಂದು ಸ್ಥಳಕ್ಕೆ ತೆರಳುತ್ತಿದ್ದರಂತೆ. ಆಗ ಕತ್ತಲಾದ ಕಾರಣಕ್ಕೆ ಉನಾಕೋಟಿಯಲ್ಲಿ ರಾತ್ರಿ ತಂಗಿದ್ದು, ಬೆಳಿಗ್ಗೆ ಎದ್ದು ಹೋಗೋಣವೆಂದು ದೇವತೆಗಳು ಹೇಳಿದರಂತೆ. ಅದಕ್ಕೆ ಒಪ್ಪಿದ ಶಿವ, ನಾಳೆ ಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆ ನಾವೆಲ್ಲ ಎದ್ದು ಹೊರಡಬೇಕು ಎಂದರಂತೆ.

ಇದಕ್ಕೆ ಒಪ್ಪಿದ ದೇವಿ ದೇವತೆಗಳು ಅಲ್ಲೇ ಮಲಗಿದ್ದರು. ಆದ್ರೆ ಮುಂಜಾನೆ ಶಿವ ಬಿಟ್ಟು ಬೇರೆ ಯಾರೂ ಎದ್ದಿರಲಿಲ್ಲ. ಆಗ ಶಿವ ಎಲ್ಲರಿಗೂ ಎಬ್ಬಿಸುವ ಪ್ರಯತ್ನ ಮಾಡಿದನಂತೆ. ಆದರೂ ಕೂಡ ಯಾರೂ ಏಳದ ಕಾರಣ, ಸಿಟ್ಟಾದ ಶಿವ, ಅವರೆಲ್ಲ ಕಲ್ಲಾಗಿ ಹೋಗಲಿ ಎಂದು ಶಾಪ ಹಾಕಿ ಹೊರಟು ಹೋದನಂತೆ. ಹಾಗಾಗಿ ಇಲ್ಲಿರುವ ಕಲ್ಲಿನ ಮೂರ್ತಿಗಳೆಲ್ಲ, ಶಾಪಗ್ರಸ್ತರಾದ ದೇವಿ ದೇವತೆಗಳೆಂದು ಹೇಳಲಾಗುತ್ತದೆ.

About The Author