Raichur : ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಭೋಜನಾಲಯ..!

ರಾಯಚೂರು : ಗ್ರಾಮ ಪಂಚಾಯತಿ ಕೆಲವು ಯೋಜನೆಗಳು ನೆನೆಗುದ್ದಿಗೆ ಬಿದ್ದು ಕೆಲವು ಬಾರಿ ಹಣ ವಾಪಸ್ ಆಗುತ್ತವೆ . ಆದರೆ ಇಲ್ಲೊಂದು ಗ್ರಾಮ ಪಂಚಾಯಿತಿಯ (Narega Plan) ಯಲ್ಲಿ ಹೈಟೆಕ್ ಭೋಜನಾಲಯ (High-tech bojanalaya) ಮಾಡಿದ್ದಾರೆ. ಆಗೆ ಅಂತರಾಷ್ಟ್ರೀಯ ಕ್ರೀಡಾಂಗಣ (nternational stadium) ದಂತೆ ಈ ಶಾಲೆಯಲ್ಲಿ ಎಲ್ಲಾ ಆಟಗಳ ಮೈದಾನ ಮಾಡಲಾಗಿದೆ. ಎಲ್ಲಿ ಅಂತೀರ ಈ ಸ್ಟೋರಿ ನೋಡಿ. ಮಕ್ಕಳಿಗೆ ಸುಸಜ್ಜಿತ ಊಟದ ಹೈಟೆಕ್ ಕೋಣೆ. ಅಂತರಾಷ್ಟ್ರೀಯ ಮೈದಾನ ಮೀರಿಸುವ ವಾಲಿಬಾಲ್, ಥ್ರೋ ಬಾಲ್ (Throw ball stadium) ಕ್ರೀಡಾಂಗಣಗಳು, ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು (raichur) ಜಿಲ್ಲೆಯ ದೇವದುರ್ಗ ತಾಲ್ಲೂಕಿನ (Devadurga Taluk) ನಾಗಡದಿನ್ನಿಯ ಸರ್ಕಾರಿ  ಪ್ರೌಢ ಶಾಲೆ (Government High School, Nagadadinni)ಯಲ್ಲಿ.  ಈ ಎಲ್ಲಾ  ಕೆಲಸ ಮಾಡಿರುವುದು ಉದ್ಯೋಗ ಖಾತ್ರಿ ಯೋಜನೆಯ (Employment Guarantee Scheme) ಅಡಿಯಲ್ಲಿ ಆಗಿರುವಂತದ್ದು . ಈ ಯೋಜನೆ ಅಡಿ ರಾಜ್ಯದಲ್ಲಿ ಎಲ್ಲಿಯೂ ಮಾಡದೆ ರಾಜ್ಯದ ಮೊದಲ ಬಾರಿಗೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ . ಇಲ್ಲಿನ ಗ್ರಾಮ ಪಂಚಾಯತಿ ಯ ಇಚ್ಚ ಶಕ್ತಿ ಎದ್ದು ಕಾಣುತ್ತಿದೆ. ಇನ್ನೂ ಜಿಲ್ಲಾಡಳಿತದ ಸಹಕಾರದೊಂದಿಗೆ ಶಾಲೆಗಳಲ್ಲಿ ಹೈಟೆಕ್ ಭೋಜನಾಲಯಗಳು , ಕಬ್ಬಡಿ ಆಟದ ಮೈದಾನ , ಖೋ ಖೋ , ಥ್ರೋ ಬಾಲ್, ವಾಲಿಬಾಲ್ ಕ್ರೀಡಾಂಗಣಗಳು ಮಾಡಿರುವುದಕ್ಕೆ ಮಕ್ಕಳು ಹರ್ಷ ವ್ಯಕ್ತಪಡಿಸಿದರು.  ಜಿಲ್ಲೆಯ 123  ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೈಟೆಕ್ ಭೋಜನಾಲಯಗಳು ಅಡುಗೆ ಕೋಣೆಗಳು  ನಿರ್ಮಿಸೊಕ್ಕೆ  ವಿಶೇಷ ಅನುದಾನ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಸುಸಜ್ಜಿತ 123 ಭೋಜನಾಲಯ ಹಾಗೂ 6 ಅಡುಗೆ ಕೋಣೆಗಳು ನಿರ್ಮಿಸೊಕ್ಕೆ ಯೋಜನೆ ಸಿದ್ದ ಗೊಂಡಿದೆ. ಇನ್ನೂ ಒಂದು ಸರ್ಕಾರಿ ಹೈಟೆಕ್ ಭೋಜನಾಲ ನಿರ್ಮಾಣ ಕ್ಕೆ 5 .50 ಲಕ್ಷ .  ಅಡುಗೆ ಕೋಣೆ ಗೆ 13 ಲಕ್ಷ ನೀಡಲಾಗಿದ್ದು , ಜಿಲ್ಲೆಯಲ್ಲಿ 499 ಪ್ರೌಢಶಾಲೆಗಳಿದ್ದು ಬಹುತೇಕ ಶಾಲೆಗಳಲ್ಲಿ ಕಾಮಗಾರಿ ಆರಂಭವಾಗಿವೆ. ಅಧಿಕಾರಿ ವರ್ಗದ ಈ ಬೆಳವಣಿಗೆಗೆ ಮಕ್ಕಳು, ಶಿಕ್ಷಕ ಸಮೂಹ ಹಾಗೂ ಸಿಬ್ಬಂದಿ ವರ್ಗದವರಲ್ಲಿ ಹರ್ಷ ಮೂಡಿದೆ. ಮಕ್ಕಳು ಮಧ್ಯಾಹ್ನ ಊಟದ ಸಮಯದಲ್ಲಿ ಮದುವೆ ಮನೆಯಲ್ಲಿ ಊಟ ಮಾಡುವಾಗ ಬಾಸವಾಗುವ ರೀತಿಯಲ್ಲಿ ಅಡುಗೆ ಕೋಣೆಯ ಚೌಕಟ್ಟು ಗೆ ನೀಡದಿರುವುದು ಗಮನ ಸೆಳೆಯಿತು. ಇನ್ನೂ ಭೋಜನಾಲಯಲ್ಲಿ ಅನ್ನದ ಮೌಲ್ಯ ತಿಳಿಸುವ ಬರಹಗಳು. ಒಟ್ಟಾರೆ ಈ ಪ್ರಯೋಗ ಕರ್ನಾಟಕ ತುಂಬೆಲ್ಲಾ ವಿಸ್ತರಿಸಿದರೆ ಮಕ್ಕಳಿಗೆ ಅನುಕೂಲ ವಾಗುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.

About The Author