ಹಲವರಿಗೆ ದಿಂಬು ಬಳಸಿದ್ರೇನೆ ಒಳ್ಳೆ ನಿದ್ದೆ ಬರೋದು. ಇಲ್ಲದಿದ್ದರೆ ನಿದ್ದೆಯೇ ಅಪೂರ್ಣ ಎನ್ನಿಸಿದಂತಾಗುತ್ತದೆ. ಆದ್ರೆ ದಿಂಬು ಬಳಸದೆ ಮಲಗಿದ್ರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿದೆ. ಮೊದಲಿಂದಲೂ ದಿಂಬು ಇಲ್ಲದೆ ಮಲಗುವ ಅಭ್ಯಾಸ ಮಾಡಿಕೊಂಡರೆ, ತುಂಬಾ ಒಳ್ಳೆಯದು ಅಂತಾ ಹೇಳತ್ತೆ ವಿಜ್ಞಾನ. ಹಾಗಾದ್ರೆ ದಿಂಬು ಬಳಸದೇ ಮಲಗಿದರೆ, ನಮ್ಮ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ದಿಂಬು ಬಳಸದೇ ಮಲಗಿದ್ದಲ್ಲಿ ನಿಮಗೆ ಕುತ್ತಿಗೆ ನೋವು ಬರುವುದಿಲ್ಲ. ನೀವು ದಿಂಬಿಟ್ಟು ಮಲಗಿದಾಗ, ಕೆಲವೊಮ್ಮೆ ಕುತ್ತಿಗೆ ನೋವು ಶುರುವಾಗುತ್ತದೆ. ನಿಮಗೆ ಹಾಗೆ ಕುತ್ತಿಗೆ ನೋವಾದ್ರೆ, ನೀವು ಎರಡರಿಂದ ಮೂರು ದಿನ ದಿಂಬು ಬಳಸದೇ ಮಲಗಿ ನೋಡಿ. ಕುತ್ತಿಗೆ ನೋವು ಮಂಗ ಮಾಯವಾಗುತ್ತದೆ. ಒಂದು ದಿನ ದಿಂಬು ಬಳಸದೇ ಮಲಗಿದಾಗ, ನಿಮಗೆ ಕಷ್ಟವಾಗಬಹುದು. ಆದ್ರೆ ಇದೇ ರೀತಿ ನೀವು ದಿಂಬಿಲ್ಲದೇ ಮಲಗುವುದನ್ನ ಪ್ರಾಕ್ಟೀಸ್ ಮಾಡಿದ್ರೆ, ನಿಮಗೇನಾದ್ರೂ ಮೈ ಕೈ ನೋವಿದ್ರೆ, ಕಡಿಮೆಯಾಗುತ್ತದೆ.
ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. ನಿದ್ದೆಗೆಟ್ಟು ಕೆಲಸ ಮಾಡಲಾಗುತ್ತಿಲ್ಲ. ತುಂಬ ಟೆನ್ಶನ್ ಆಗುತಿದ್ದೆ ಅಂತೆಲ್ಲ ಅನ್ನಿಸಿದರೆ, ನೀವು ದಿಂಬು ಬಳಸದೇ ಮಲಗಿ. ಇದರಿಂದ ಏನೇ ಟೆನ್ಶನ್ ಇದ್ದರೂ, ನಿಮಗೆ ಒಳ್ಳೆಯ ನಿದ್ದೆ ಬರುತ್ತದೆ. ಇನ್ನು ಬೆನ್ನು ನೋವು, ಮೂಳೆ ನೋವಿದ್ದರೆ, ದಿಂಬು ಬಳಸದೇ ಮಲಗಿದ್ದಲ್ಲಿ, ಅದರಿಂದ ಮುಕ್ತಿ ಪಡೆಯಬಹುದು.
ಇಷ್ಟೇ ಅಲ್ಲದೇ ನಿಮ್ಮ ಮುಖದ ಸೌಂದರ್ಯ ಮತ್ತು ತಲೆಗೂದಲಿನ ಸೌಂದರ್ಯ ಹೆಚ್ಚಿಸೋಕ್ಕೂ, ಇದು ಸಹಾಯಕಾರಿಯಾಗಿದೆ. ದಿಂಬು ಬಳಸದೇ ಮಲಗಿದರೆ, ನಿಮ್ಮ ಮುಖದ ಮೇಲೆ ರಿಂಕಲ್ಸ್ ಆಗುವುದಿಲ್ಲ. ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.