ಬೆಳಿಗ್ಗೆ ಕೆಲವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಾರೆ. ಡೈರೆಕ್ಟ್ ತಿಂಡಿಯನ್ನೇ ತಿನ್ನುತ್ತಾರೆ. ಇನ್ನು ಡಯಟ್ ಮಾಡುವ ಕೆಲವರು ಜ್ಯೂಸ್ ಕುಡಿಯುತ್ತಾರೆ. ಅಥವಾ ಹಣ್ಣು ತಿನ್ನುತ್ತಾರೆ. ಆದ್ರೆ ಇದೆಲ್ಲವೂ ತಪ್ಪು. ಯಾಕಂದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ, ಏನೇ ತಿನ್ನುವುದಕ್ಕೂ ಮುನ್ನ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕೆಲವರಿಗೆ ಬೆಳಿಗ್ಗೆ ಬೆಳಿಗ್ಗೆ ನೀರು ಕುಡಿದರೆ ವಾಕರಿಕೆ ಬರತ್ತೆ. ಆದ್ರೆ ನೀವು ಬರೀ ಎರಡು ದಿನ ನೀರು ಕುಡಿಯುವುದನ್ನ ಪ್ರ್ಯಾಕ್ಟೀಸ್ ಮಾಡಿ. ನಂತರ ನಿಮಗೆ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯದಿದ್ರೆ, ಏನೋ ಮಿಸ್ ಆದಂಗೆ ಅನ್ನಿಸುತ್ತದೆ. ಯಾಕೆ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಬೇಕು..? ಇದರಿಂದಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ನಿಮಗೆ ಮಲಬದ್ಧತೆ ಸಮಸ್ಯೆ ಇದ್ದಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಆಗ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೇ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆಗೂ, ಬಿಸಿ ನೀರಿನಿಂದ ಮುಕ್ತಿ ಸಿಗುತ್ತದೆ. ಇದರ ಜೊತೆಗೆ ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ.
ಅಲ್ಲದೇ ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಬೇಕು ಅಂದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಅಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಇದು ಸಹಕಾರಿಯಾಗಿದೆ. ನೀವು ದೇಹದ ತೂಕ ಇಳಿಸಿಕೊಳ್ಳಬೇಕು ಅಂತಾ ಅಂದುಕೊಂಡಿದ್ದಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ.
ಅಷ್ಟೇ ಅಲ್ಲದೇ, ನೀವು ಪ್ರತಿದಿನ ತಲೆ ನೋವಿನಿಂದ ಬಳಲುತ್ತಿದ್ದರೆ, ಇದಕ್ಕೂ ಬಿಸಿ ನೀರೇ ರಾಮಬಾಣ. ಬಿಸಿ ನೀರನ್ನು ಕುಡಿಯುವುದರಿಂದ ಮೈಗ್ರೇನ್, ಸೈನಸ್ ಮತ್ತು ನಾರ್ಮಲ್ ತಲೆನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಯಾಕಂದ್ರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ಕೂಡ ತಲೆನೋವಾಗುವ ಸಮಸ್ಯೆ ಬರುತ್ತದೆ. ಹಾಗಾಗಿ ಬೆಳಿಗ್ಗೆ ಎರಡು ಗ್ಲಾಸ್ ಆದರೂ ಉಗುರು ಬೆಚ್ಚಗಿನ ನೀರು ಕುಡಿಯಿರಿ.