ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪುತ್ರಿ ಪುಟಾಣಿ ಆಯ್ರಾಳ ಮುಖವನ್ನೇ ಸಂಸದೆ ಸುಮಲತಾ ಇನ್ನೂ ನೋಡಿಲ್ಲವಂತೆ. ಚುನಾವಣೆ ಮತ್ತಿತರ ಕೆಲಸಗಳಲ್ಲಿ ಬ್ಯೂಸಿಯಾಗಿದ್ದ ಸುಮಲತಾ ಆಯ್ರಾಳ ನಾಮಕರಣದಲ್ಲೂ ಪಾಲ್ಗೊಂಡಿಲ್ಲ.
ಕಳೆದ ಡಿಸೆಂಬರ್ ನಲ್ಲಿ ಜನಿಸಿದ ರಾಕಿಂಗ್ ಸ್ಟಾರ್ ಮುದ್ದು ಮಗಳನ್ನು ಸುಮಲತಾ ಅಂಬರೀಶ್ ಇನ್ನೂ ಖುದ್ದಾಗಿ ಭೇಟಿ ಮಾಡಿಲ್ಲ. ಎಲೆಕ್ಷನ್ ಮತ್ತಿತರ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಸುಮಲತಾ ಪುಟಾಣಿ ಆಯ್ರಾಳನ್ನು ನೋಡೋಕೆ ಯಶ್ ಒಂದು ಕಾರ್ಯಕ್ರಮ ನಿಗದಿ ಮಾಡಿದ್ದಾರಂತೆ. ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಆಯ್ರಾಳಿಗಾಗಿ ತೊಟ್ಟಿಲು ತಯಾರು ಮಾಡೋದಕ್ಕೆ ಆರ್ಡರ್ ಮಾಡಿದ್ರು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಆ ತೊಟ್ಟಿಲನ್ನು ಯಶ್ ಕುಟುಂಬಕ್ಕೆ ನೀಡಬೇಕೆನ್ನುವಷ್ಟರಲ್ಲಿ ಅಂಬರೀಶ್ ಇಹಲೋಕ ತ್ಯಜಿಸಿದ್ರು. ಇದಾದ ಬಳಿಕ ಸುಮಲತಾ ಅಂಬರೀಶ್ ಯಶ್ ಕುಟುಂಬಕ್ಕೆ ಆ ತೊಟ್ಟಿಲನ್ನು ತಲುಪಿಸಿದ್ರು.
ಆದ್ರೆ ಇದೀಗ ಆಯ್ರಾ ಹುಟ್ಟಿ 7 ತಿಂಗಳೇ ಕಳೆದಿದೆ . ಆದ್ರೆ ಯಶ್ ಮಾತ್ರ ಆ ತೊಟ್ಟಿಲೊಳಗೆ ಆಯ್ರಾಳನ್ನು ಮಲಗಿಸಿಲ್ಲ. ಯಾಕಂದ್ರೆ ಅಂಬರೀಶ್ ಅಷ್ಟು ಪ್ರೀತಿಯಿಂದ ಗಿಫ್ಟ್ ನೀಡಿದ ಆ ತೊಟ್ಟಿಲಲ್ಲಿ ಅವರ ಪತ್ನಿ ಸುಮಲತಾರವರೇ ಮಗಳನ್ನು ಮಲಗಿಸಬೇಕು ಅಂತ ನಿರ್ಧಾರ ಮಾಡಿದ್ದಾರಂತೆ. ಆದ್ರೆ ಈ ವರೆಗೂ ಸುಮಲತಾ ಯಶ್ ಮನೆಗೆ ಭೇಟಿ ನೀಡೋಕೆ ಟೈಮ್ ಕೂಡಿ ಬಂದಿಲ್ಲ. ಶೀಘ್ರವೇ ಇದಕ್ಕಾಗಿ ಸುಮಲತಾ ಯಶ್ ಮನೆಗೆ ಭೇಟಿ ನೀಡಲಿದ್ದಾರಂತೆ. ಹಾಗೆಯೇ ಸುಮಲತಾ ಕೂಡ ತಮ್ಮ ಮೊಮ್ಮಗಳನ್ನು ನೇರವಾಗಿ ಕಣ್ತುಂಬಿಕೊಳ್ಳೋಕೆ ಕಾತುರಾಗಿದ್ದಾರಂತೆ.
ನಿಖಿಲ್ ಗಾಗಿ ರೆಡಿಯಾಗಿವೆ ಸಾಲು ಸಾಲು ಕಥೆ..! ಮಿಸ್ ಮಾಡದೇ ಈ ವಿಡಿಯೋ ನೋಡಿ