Sunday, March 3, 2024

Latest Posts

ವಿಂಡೀಸ್ ವಿರುದ್ಧ ಬ್ಲೂ ಬಾಯ್ಸ್ ಬ್ಯಾಟಿಂಗ್- 5ನೇ ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ..!

- Advertisement -

ಇಂಗ್ಲೆಂಡ್: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿರುವ ಕೊಹ್ಲಿ ಬಾಯ್ಸ್, 5ನೇ ಗೆಲುವಿನ ವಿಶ್ವಾಸದಲ್ಲಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಎದುರು ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಕೂಡ ಕಣಕ್ಕಿಳಿಯುತ್ತಿದೆ. ಮತ್ತೊಂದೆಡೆ ಟೂರ್ನಿಯಲ್ಲಿ ಸಾಲು ಸಾಲು ಸೋಲು ಕಂಡಿರೋ ವಿಂಡೀಸ್, ಟೀಮ್ ಇಂಡಿಯಾ ವಿರುದ್ಧ ಗೆದ್ದು ಸೋಲಿನ ಕಹಿಯನ್ನ ಮರೆಯಲು ಹೊರಟಿದೆ.

ಕೆಎಲ್​.ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಕ್ಯಾಪ್ಟನ್) ವಿಜಯ್ ಶಂಕರ್, ಎಂ.ಎಸ್​.ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಜಸ್​​ಪ್ರೀತ್ ಬೂಮ್ರಾ ವಿಂಡೀಸ್ ವಿರುದ್ಧ ಮೈದಾನದಲ್ಲಿ ಸೆಣಸಾಡುತ್ತಿದ್ದಾರೆ.

ಇಂಡಿಯಾ- ಇಂಗ್ಲೆಂಡ್ ಪಂದ್ಯದಲ್ಲಿ ಆರೆಂಜ್ ಜರ್ಸಿ ತೊಡೋದು ಯಾರು !!?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=WBF33LNmlfg

- Advertisement -

Latest Posts

Don't Miss