Tuesday, July 16, 2024

Latest Posts

‘ಜನ ಅದೇನ್ ನೋಡಿ ಬಿಜೆಪಿಗೆ ವೋಟ್ ಹಾಕ್ತಾರೋ ಗೊತ್ತಿಲ್ಲ’- ಸಿದ್ದು ಹತಾಶೆ

- Advertisement -

ಬಾಗಲಕೋಟೆ: ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದ್ದಕ್ಕೆ ವೇದಿಕೆಯಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹಂಚಿಕೊಂಡಿದ್ದಾರೆ. ಅಲ್ಲದೆ ಜನರು ಅದೇನ್ ನೋಡಿ ಬಿಜೆಪಿಗೆ ವೋಟ್ ಹಾಕ್ತಾರೋ ಗೊತ್ತಿಲ್ಲ ಅಂತ ತಮ್ಮ ಹತಾಶೆ ಹೊರಹಾಕಿದ್ದಾರೆ.

ಬಾದಾಮಿ ತಾಲೂಕಿನ ಆಲೂರ ಎಸ್ ಕೆ ಗ್ರಾಮದಲ್ಲಿ ಗ್ರಾ.ಪಂ ಕಚೇರಿ ಕಟ್ಟಡ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಲ್ಲಿ ನಮಗೆ ಲೀಡ್ ಬರುತ್ತೆ ಅಂತ ಅಂದುಕೊಂಡಿದ್ದೆ. ಆದ್ರೆ ಬಿಜೆಪಿಗೆ 9 ಸಾವಿರ ಲೀಡ್ ಸಿಕ್ಕಿದೆ.ನಾನು ಬಾದಾಮಿ ಶಾಸಕನಾದ ಬಳಿಕ 1,300 ಕೋಟಿ ಅನುದಾನ ತಂದಿದ್ದೇನೆ. ಆದ್ರೆ ಜನ ಅದೇನ್ ನೋಡಿ ಬಿಜೆಪಿಗೆ ವೋಟ್ ಹಾಕ್ತಾರೆ ಅಂತ ನನಗೆ ಗೊತ್ತಾಗುತ್ತಿಲ್ಲ ಅಂತ ತಮ್ಮ ಹತಾಶೆ ಹೊರಹಾಕಿದ್ರು.

ಅಲ್ಲದೆ ಪಂಚಾಯಿತಿಗೆ ಅನುದಾನ, ಅನ್ನಭಾಗ್ಯ, ಶೂಭಾಗ್ಯ ಯೋಜನೆ ತಂದಿದ್ದು ನಾವು. ಕೆಲಸ ಮಾಡಿದವರು ನಾವು ವೋಟ್ ಮಾತ್ರ ಬಿಜೆಪಿಗೆ ಹಾಕ್ತಾರೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಬೇಸರ ಹೊರಹಾಕಿದ್ರು.

ಇನ್ಮುಂದೆ ರೈತರ ಆದಾಯ ಡಬಲ್…!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=I0UrZSB6mlo
- Advertisement -

Latest Posts

Don't Miss