Tuesday, June 3, 2025

Latest Posts

APPU ಹೆಸರಲ್ಲಿ ಉಪಗ್ರಹ ಉಡಾವಣೆ..!

- Advertisement -

ನಟ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ನಟ  ಅವರು ನಿಧನ ಹೊಂದಿದ ನಂತರದಲ್ಲಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಈಗ ಅಚ್ಚರಿ ಎಂಬಂತೆ ಪುನೀತ್​ ಹೆಸರಲ್ಲಿ ಉಪಗ್ರಹ(Satellite ) ಉಡಾವಣೆ ಬಗ್ಗೆ ಸಚಿವ ಸಿ. ಎನ್. ಅಶ್ವತ್ ನಾರಾಯಣ್ (Ashwath Narayan) ಹೇಳಿಕೆ ನೀಡಿದ್ದಾರೆ. ಇಂದು ರಾಷ್ಟ್ರೀಯ ವಿಜ್ಞಾನ ದಿನ (National Science Day). ಇದರ ಅಂಗವಾಗಿ ಮಲ್ಲೇಶ್ವರದ (Malleswaram) 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ (government undergraduate college) ಅಶ್ವತ್ಥ್​ ನಾರಾಯಣ್​ (Ashwathth Narayan) ತೆರಳಿದ್ದರು. ಸ್ವಾತಂತ್ರ್ಯ ಬಂದು 75ನೇ ವರ್ಷ ಆದ ಹಿನ್ನೆಲೆಯಲ್ಲಿ, ಐಟಿಸಿಎ 75 ಉಪಗ್ರಹಗಳನ್ನು (ITCA 75 satellites) ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹ ರಾಜ್ಯ ಸರ್ಕಾರ ಸಹಕಾರದಲ್ಲಿ (State government cooperation) ತಯಾರಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳು ಇದನ್ನು ನಿರ್ಮಿಸುತ್ತಿದ್ದು, ರಾಜ್ಯ ಸರ್ಕಾರವೇ ಇದಕ್ಕೆ ಹಣ ನೀಡುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಖುಷಿಪಟ್ಟಿದ್ದಾರೆ. ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲೇ ಇರಲಿದೆ. ಎಲ್ಲ ನಿರ್ವಹಣೆಯೂ ಅಲ್ಲಿಂದಲೇ ಆಗಲಿದೆ. ಈ ಯೋಜನೆಗೆ 20 ಸರ್ಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಇದು ಲಾಂಚ್​ ಆಗಬಹುದು. ₹1.90 ಕೋಟಿ ವೆಚ್ಚದಲ್ಲಿ ಉಪಗ್ರಹ ಸಿದ್ಧವಾಗುತ್ತಿದೆ. ನಾನಾ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಉಪಗ್ರಹದ ಪೇಲೋಡ್ ತಿಳಿವಳಿಕೆ ನೀಡಲಾಗುತ್ತದೆ. ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ ಮಾಡಿಸಲಾಗುತ್ತದೆ. ಹಲವರ ಜತೆ ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ.

- Advertisement -

Latest Posts

Don't Miss