ಬೆಂಗಳೂರಿನ (Bengaluru) ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (13th Bengaluru International Film Festival) ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು (ಮಾರ್ಚ್ 3) ಸಂಜೆ ಚಾಲನೆ ನೀಡಿದ್ದಾರೆ. ಈ ಬಾರಿ 55 ದೇಶಗಳ 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿರುವ ಪಿವಿಆರ್ನಲ್ಲಿ ಈ ಸಿನಿಮೋತ್ಸವ ನಡೆಯಲಿದೆ. ಎಲ್ಲಾ ಸಿನಿಮಾಗಳು ಇಲ್ಲಿಯೇ ಪ್ರದರ್ಶನ ಕಾಣಲಿದೆ. ಈಗಾಗಲೇ ಯಾವ ಸಿನಿಮಾ ಯಾವ ಸಮಯದಲ್ಲಿ ಪ್ರದರ್ಶನ ಕಾಣುತ್ತಿದೆ ಎನ್ನುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಲವು ರಾಷ್ಟ್ರಗಳಲ್ಲಿ ಹಲವು ರೀತಿಯ ಸಿನಿಮಾಗಳು ತಯಾರಾಗುತ್ತವೆ. ಪ್ರತಿ ದೇಶದ ಸಿನಿಮಾಗಳು ಅಲ್ಲಿಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಈ ರೀತಿ 55 ದೇಶಗಳ ಸಿನಿಮಾಗಳನ್ನು ಒಂದೇ ಕಡೆ ನೋಡುವ ಅವಕಾಶ ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸದಲ್ಲಿ ಆಗುತ್ತಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman), ರಾಜೀವ್ ಚಂದ್ರಶೇಖರ್ (Rajiv Chandrasekhar) ಅವರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅತಿಥಿಯಾಗಿ ಭಾರತಿ ವಿಷ್ಣುವರ್ಧನ್ ಭಾಗಿಯಾಗಿದ್ದಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ (Karnataka Flim Academy Sunil Puranik), ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮೊದಲಾದವರು ಪಾಲ್ಗೊಂಡಿದ್ದಾರೆ. ಈ ಬಾರಿಯ ಬೆಂಗಳೂರು ಸಿನಿಮೋತ್ಸವಕ್ಕೆ ವಿಶೇಷ ರೀತಿಯಲ್ಲಿ ಏರಿಯಲ್ ಬ್ಯಾನರ್ ಡಿಸ್ಪ್ಲೇ ಪ್ರದರ್ಶನ ಮಾಡಲಾಯಿತು. ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಅವರು 46ನೇ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಈ ಕಾರಣಕ್ಕೆ ಸಿನಿಮೋತ್ಸವದಲ್ಲಿ ಪುನೀತ್ ಅವರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಿ ಫಿಲ್ಮ್ ಫೆಸ್ಟಿವಲ್ ಆರಂಭ ಮಾಡಿದೆ. ಈ ದೇಶ ಬಲಿಯೋದಕ್ಕೆ ಹಾಗೂ ಬೆಳೆಯೋದಕ್ಕೆ ಕನ್ನಡ ಚಿತ್ರರಂಗದ ಅವಶ್ಯಕತೆ ಮುಖ್ಯವಾಗಿದೆ. ನನಗೆ ಬ್ಲಾಕ್ ಆ್ಯಂಡ್ ವೈಟ್ ಸಿನಿಮಾಗಳೆ ತುಂಬಾ ಇಷ್ಟ. ಪುನೀತ್ ಸಣ್ಣ ವಯಸ್ಸಲ್ಲೆ ಸಾಧನೆ ಮಾಡಿದ್ದರು. ಸ್ವಾಮಿ ವಿವೇಕಾನಂದ ಅವರು ಕೂಡ ಸಣ್ಣ ವಯಸ್ಸಲ್ಲೇ ಸಾಧನೆ ಮಾಡಿದ್ದರು’ ಎಂದು ಸಿಎಂ ಬೊಮ್ಮಾಯಿ ಎಂದಿದ್ದಾರೆ.

