KS Eshwarappa : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದಕ್ಕೆ ಕಾರಣ ಬಿ.ಎಸ್ ಯಡಿಯೂರಪ್ಪ..!

ಬಿ.ಎಸ್ ಯಡಿಯೂರಪ್ಪ (B S Yeddyurappa) ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು (BJP) ಅಧಿಕಾರಕ್ಕೆ ತಂದಿದ್ದಾರೆ. ಈ ಮೂಲಕ ಬಿಜೆಪಿ ಸಂಘಟನೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಂಘಟನೆ ಶಕ್ತಿಯಿಂದ 2023ರಲ್ಲಿ 150 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಪೂರ್ಣ ಬಹುಮತ ಬಿ ಎಸ್ ವೈ ಅವರ ಕನಸು ನನಸು ನಾವು ಮಾಡುತ್ತೇವೆ ಎಂದು ಬಿ ಎಸ್ ವೈ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹಾಡಿ ಹೊಗಳಿದ್ದಾರೆ. ಬಳಿಕ ಬಜೆಟ್ ಕುರಿತು ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಬಜೆಟ್ ಬೊಂಬಾಟ್ ಅಗಿತ್ತು. ಸರ್ವ ವ್ಯಾಪ್ತಿ, ಸರ್ವ ಸ್ಪರ್ಶಿ ಬಜೆಟ್ ಸಿಎಂ ಬಸವರಾಜ್ ಬೊಮ್ಮಾಯಿ (CM Bommai) ಅವರದ್ದು. ವಿರೋಧ ಪಕ್ಷದವರಿಗೂ ಟೀಕೆ ಅವಕಾಶ ನೀಡದ ಬಜೆಟ್ ಮಂಡನೆ ಬೊಮ್ಮಾಯಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

About The Author