ರಾಯಚೂರು : ಹೀಗೆ ನೀರಿನ ಆಳಕ್ಕೆ ಇಳಿದು ಅತ್ತಿಂದಿತ್ತ,ಇತ್ತಿಂದತ್ತ ಓಡಾಡ್ತಿರೊ ಯುವಕರ ಪಡೆ. ಇವರ ಕೈ ಜೋಡಿಸಿರೊ ಮಹಿಳೆಯರು. ಕಣ್ಣು ಹಾಯಿಸಿದ ಕಡೆಯೆಲ್ಲಾ ಬಿದ್ದಿರೊ ರಾಶಿ-ರಾಶಿ ಕಸ. ಇದೆಲ್ಲಾ ಕಂಡು ಬಂದಿದ್ದು ತುಂಗಭದ್ರಾ ನದಿಯ (Tungabhadra River) ತೀರದಲ್ಲಿ. ಹೌದು ತುಂಗಭದ್ರಾ ನದಿ ಕಲ್ಯಾಣ ಕರ್ನಾಟಕ ಭಾಗ (Part of Welfare Karnataka) ಸೇರಿ ಪಕ್ಕದ ಆಂದ್ರದ ಜನಕ್ಕೂ ಆಧಾರವಾಗಿರೊ ಜೀವನಾಡಿ. ಈ ನದಿ ದಿನೇ ದಿನೇ ಕಲುಷಿತಗೊಳ್ಳುತ್ತಲೇ ಇದೆ. ಬೇಸಿಗೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನ ಇದೇ ತುಂಗಭದ್ರಾ ನದಿಯನ್ನು ನಂಬಿಕೊಂಡು ನದಿ ನೀರಿನ ಮೇಲೆ ಆಧಾರವಾಗಿರುತ್ತಾರೆ. ಆದ್ರೆ ತುಂಗೆ ಕಲುಷಿತಗೊಂಡಿರೊ ಹಿನ್ನೆಲೆ,ವರ್ಷಗಟ್ಟಲೇ ಹರಿಯಬೇಕಿದ್ದ ನದಿ ಬತ್ತಿ ಹೋಗಿದೆ. ಮಾರ್ಚ್,ಏಪ್ರಿಲ್ (March, April) ಟೈಂನಲ್ಲಿ ಜನ ನೀರಿಗೆ ಹಾಹಾಕಾರ ಪಡೊ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಯುವ ಬ್ರಿಗೇಡ್ ಟೀಂ (Yuva Brigade Team) ಮಂತ್ರಾಲಯ (mantralaya) ತೀರದಲ್ಲಿ ಬೀಡುಬಿಟ್ಟಿದ್ದು, ಕಳೆದ ಎರಡು ದಿನಗಳಿಂದ ಮಂತ್ರಾಲಯದ ಪಕ್ಕದಲ್ಲಿ ಹರಿಯೊ ತುಂಗಾ ನದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ಮಂತ್ರಾಲಯದ ಮಠ ವಿವಿಧ ರೂಪದಲ್ಲಿ ತುಂಗಾನದಿಯ ಬಗ್ಗೆ ಕಾಳಜಿ ವಹಿಸಿದೆ. ಆದ್ರೆ ಇಲ್ಲಿಗೆ ಬರೋ ಭಕ್ತರು ಮಾತ್ರ ಇದೇ ನದಿಯಲ್ಲಿ ಸ್ನಾನ ಮಾಡಿ, ಉಟ್ಟ ಬಟ್ಟೆಗಳನ್ನು ಅದೇ ತುಂಗಾನದಿಯಲ್ಲಿ ಬಿಟ್ಟು ಹರಕೆ ತೀರಿಸ್ತಾರೆ. ಹೌದು ಗಂಗಾ ಸ್ನಾನ ತುಂಗಾ ಪಾನ ಅನ್ನೊ ಮಾತಿದೆ. ಆದ್ರೆ, ಮಂತ್ರಾಲಯದ ಬಳಿಯ ತುಂಗಾ ನದಿಗೆ ಇಳಿದ್ರೆ, ಈ ಮಾತು ಮರೆತುಹೋಗತ್ತೆ. ಅಷ್ಟರ ಮಟ್ಟಿಗೆ ನದಿ ಕಲುಷಿತವಾಗಿ ಹೋಗಿದೆ. ಹೀಗಾಗಿ ವಿವಿಧ ಕಡೆಗಳಿಂದ ಬಂದಿದ್ದ ಸುಮಾರು 1000 ಕ್ಕು ಹೆಚ್ಚು ಸ್ವಯಂ ಸೇವಕರು, ಯುವ ಬ್ರಿಗೇಡ್ ಟೀಂ ಜೊತೆ ಕೈಜೋಡಿಸಿ, ತುಂಗಾ ನದಿ ಸ್ವಚ್ಛತೆಯಲ್ಲಿ ಪಾಲ್ಗೊಂಡ್ರು. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು (Sri Subhudendra Tirtha) ಕೂಡ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ, ಈ ವಿನೂತನ ಕಾರ್ಯಕ್ಕೆ ಚಾಲನೆ ನೀಡಿದ್ರು. ತುಂಗಾನದಿಯಲ್ಲಿ ಭಕ್ತರು ಬೀಸಾಡಿದ್ದ ಸೀರೆ,ಪಂಚೆ ಸೇರಿ ವಿವಿಧ ಬಟ್ಟೆಗಳು,ವಸ್ತುಗಳನ್ನು ಯುವ ಬ್ರಿಗೇಡ್ ಟೀಂ ಹರಸಾಹಸ ಪಟ್ಟು ಹೊರ ತೆಗೆದ್ರು. ನೀರಿನ ಆಳಕ್ಕೆ ಇಳಿದು, ದುರ್ವಾಸನೆ, ಮೈಸುಡುವ ಬಿಸಿಲಿನ ಮಧ್ಯೆ ಕಸವನ್ನು ತೆಗೆದು,ಹಂತಹಂತವಾಗಿ ಹೊರಹಾಕಿದ್ರು. ಬಳಿಕ ಆ ಕಸವನ್ನು ಶೇಖರಣೆ ಮಾಡಿ, ಟ್ರಾಕ್ಟರ್ಗಳ ಮೂಲಕ ನಿರ್ಜನ ಪ್ರದೇಶದಲ್ಲಿ ಡಂಪ್ ಮಾಡಲಾಯ್ತು. ಎರಡು ದಿನಗಳ ಕಾಲ ನಡೆದ ತುಂಗಾನದಿ ಸ್ವಚ್ಛತಾ ಕಾರ್ಯದಲ್ಲಿ ಸುಮಾರು 50 ಕ್ಕು ಹೆಚ್ಚು ಲೋಡ್ನಷ್ಟು ಕಸವನ್ನು ತುಂಗಾನದಿಯಿಂದ ಹೊರತೆಗೆದು,ವಿಲೆವಾರಿ ಮಾಡಲಾಗಿದೆ. ಮಂತ್ರಾಲಯದ ಪಕ್ಕದಲ್ಲಿ ಹರಿಯೋ ತುಂಗಾನದಿ ತೀರದಲ್ಲಿ ರಾಯರು ಓಡಾಡಿದ ಪ್ರತಿಥಿ ಇದೆ. ಹೀಗಾಗಿ ಭಕ್ತರು ತುಂಗಾನದಿಯಲ್ಲಿ ಸ್ನಾನ ಮಾಡಿ, ಉಟ್ಟ ಬಟ್ಟೆ ಅಲ್ಲೆ ಬಿಡದೆ ನದಿ ಕಲುಷಿತಗೊಳಿಸದೇ, ನದಿಯ ಸ್ವಚ್ಛತೆಯನ್ನು ಕಾಪಾಡಬೇಕಿದೆ.
ಅನಿಲ್ ಕುಮಾರ್,ಕರ್ನಾಟಕ ಟಿವಿ,ರಾಯಚೂರು.