ಬೆಂಗಳೂರು : ಉಕ್ರೇನ್ನಲ್ಲಿ ರಷ್ಯಾ ಶೆಲ್ ದಾಳಿಗೆ ಸಾವನ್ನಪ್ಪಿದ್ದ ಹಾವೇರಿ ಮೂಲದ ನವೀನ್ (Naveen) ಪಾರ್ಥಿವ ಶರೀರ (Dead Body) ಭಾನುವಾರ ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದ್ದಾರೆ. ನವೀನ್ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಭಾನುವಾರ ಪಾರ್ಥಿವ ಶರೀರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bangalore international Airport) ತರಲಾಗುವುದು ಎಂದು ತಿಳಿಸಿದರು. ಸಾವನ್ನಪ್ಪಿದ ನವೀನ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಅನ್ನು ಕೂಡ ವಿತರಿಸಿದ್ದಾರೆ.
ಇನ್ನು ಆಪರೇಷನ್ ಗಂಗಾ ಅಡಿಯಲ್ಲಿ ಈಗಾಗಲೇ ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ. ನವೀನ್ ಜೊತೆ ಇದ್ದ ಸ್ನೇಹಿತರು ಕೂಡ ಈಗಾಗಲೇ ಸುರಕ್ಷಿತವಾಗಿ ಬಂದು ಇಳಿದಿದ್ದಾರೆ. ಮಗ ಸಾವನ್ನಪ್ಪಿದ್ದು ಆತನ ಪಾರ್ಥಿವ ಶರೀರ ಬಾರದ ನೋವಿನಲ್ಲಿ ಕುಟುಂಬಸ್ಥರು ಇದ್ದಾರೆ. ಈಗಾಗಲೇ ಮೂರು ದಿನದ ಕಾರ್ಯ ಮಾಡಿರುವ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಲು ನವೀನ್ ಪಾರ್ಥಿವ ಶರೀರಕ್ಕೆ ಎದುರು ನೋಡುತ್ತಿದ್ದಾರೆ. ನವೀನ್ ಪೋಷಕರಿಗೆ ಸಮಾಧಾನ ಮಾಡಿದ ಸಿಎಂ ಸೇರಿದಂತೆ ಎಲ್ಲಾ ರಾಜಕೀಯ ಮುಖಂಡರಿಗೂ ತಮ್ಮ ಮಗನ ಪಾರ್ಥಿವ ಶರೀರವನ್ನು ತರಿಸುವ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದ್ದರು.
C M bommai : ನವೀನ್ ಪಾರ್ಥಿವ ಶರೀರ ಭಾನುವಾರ ಬೆಂಗಳೂರಿಗೆ ಆಗಮನ..!
- Advertisement -
- Advertisement -