Tuesday, January 14, 2025

Latest Posts

Karnatakaದಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ..!

- Advertisement -

ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಶಿಕ್ಷಣ (Primary Education) ಮತ್ತು ಪ್ರೌಢ ಶಿಕ್ಷಣ ಸಚಿವರಾದ (Minister of Higher Education) ಬಿ ಸಿ ನಾಗೇಶ್ (B C Nagesh) ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ 21 ಸಾವಿರ ಗಣಿತ (Mathematics) ಶಿಕ್ಷಕರ ಹುದ್ದೆಗಳ ಕೊರತೆಯಿದ್ದು, ಹಾಗೆಯೇ 1 ರಿಂದ ಎಂಟನೇ ತರಗತಿ ಶಾಲೆಗಳಲ್ಲಿ ಸುಮಾರು 36 ಸಾವಿರ ಶಿಕ್ಷಕರ ಕೊರತೆ ಇರುವುದರಿಂದ 15 ಸಾವಿರ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಹೈದರಾಬಾದ್ ಕರ್ನಾಟಕ (Hyderabad Karnataka) ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕ, ಉಳಿದ ಎಲ್ಲಾ ಕಡೆಯಿಂದ 10 ಸಾವಿರ ಶಿಕ್ಷಕರ ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಮಾರ್ಚ್ (March) 23 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ 22 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಮೊದಲ ಜನರಲ್ ಪೇಪರ್ 150 ಅಂಕಗಳಿಗೆ ಇರುತ್ತದೆ. ಎರಡನೇ ಪತ್ರಿಕೆ ವಿಷಯವಾರು 150 ಅಂಕಗಳಿಗೆ ಇದ್ದು, ಪಾಸಾಗಲು ನನಗೊಂದು ಅಂಕಗಳು ಕಡ್ಡಾಯವಾಗಿರುತ್ತದೆ. ಇನ್ನು ಮೂರನೇ ಪತ್ರಿಕೆ ಭಾಷಾವಾರು ಪರೀಕ್ಷೆಯಲ್ಲಿ 100 ಅಂಕಗಳಿಗೆ ಇದ್ದು, ಪಾಸಾಗಲು 50 ಅಂಕ ಕಡ್ಡಾಯ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಏಪ್ರಿಲ್ (April) 22ರೊಳಗೆ ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

- Advertisement -

Latest Posts

Don't Miss