Friday, November 22, 2024

Latest Posts

Summer Special: ಬಿಸಿಲಿನ ದಾಹ ತಣಿಸುವ 4 ತರಹದ ಶರ್ಬತ್..

- Advertisement -

ಬೇಸಿಗೆಗಾಲ ಶುರುವಾಗಿದೆ. ಸುಮ್ಮನೆ ಕೂತರೂ ಕೂಡ ಬಾಯಾರಿಕೆಯಾಗುವ ಹೊತ್ತು ಇದು. ಇಂಥ ಹೊತ್ತಲ್ಲಿ, ನಾವು ಬರೀ ನೀರು ಕುಡಿಯುವ ಬದಲು ಥರಹೇವಾರಿ ಜ್ಯೂಸ್ ಕುಡಿಯೋದು ಬೆಸ್ಟ್. ಹಾಗಾಗಿ ನಾವು 4 ಥರದ ಜ್ಯೂಸ್ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ರೆಸಿಪಿಯಲ್ಲಿ ಸಕ್ಕರೆ ಬದಲು ನೀವು ಬೆಲ್ಲವನ್ನೂ ಬಳಸಬಹುದು. ಹಾಗಾದ್ರೆ ಆ ರೆಸಿಪಿ ಯಾವುದು..? ಅದನ್ನು ಮಾಡಲು ಯಾವ ಯಾವ ಸಾಮಗ್ರಿ ಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಮಿಂಟ್ ಲೆಮನ್ ಜ್ಯೂ. ಒಂದು ಗ್ಲಾಸಿಗೆ 10 ಫ್ರೆಶ್ ಪುದೀನಾ ಎಲೆ ಮತ್ತು ಎರಡು ನಿಂಬೆ ಹೋಳು ಹಾಕಿ ಮ್ಯಾಶ್ ಮಾಡಿ, ರಸ್ ತೆಗೆಯಿರಿ. ಪುದೀನಾ ಮತ್ತು ನಿಂಬೆ ಹಣ್ಣು ಮತ್ತು ಅದರ ರಸ ಗ್ಲಾಸ್‌ನಲ್ಲಿಯೇ ಇರಲಿ. ಈಗ ಅದೇ ಗ್ಲಾಸ್‌ಗೆ ಅಗತ್ಯಕ್ಕೆ ಬೇಕಾದಷ್ಚು ಸಕ್ಕರೆ, ಐಸ್ ಕ್ಯೂಬ್ಸ್ ಹಾಕಿ. ನಂತರ ಪ್ಲೇನ್ ಸೋಡಾ ಹಾಕಿ, ಮಿಕ್ಸ್ ಮಾಡಿದ್ರೆ ಮಿಂಟ್ ಲೆಮನ್ ಜ್ಯೂಸ್ ರೆಡಿ.

ಎರಡನೇಯದು ಆಮ್ ಪನ್ನಾ. ಎರಡು ಮಾವಿನ ಕಾಯಿಯನ್ನು ಕುಕ್ಕರ್‌ಗೆ ಹಾಕಿ 3ರಿಂದ 4 ಸಿಳ್ಳೆ ಬರುವವರೆಗೂ ಬೇಯಿಸಿ. 10 ನಿಮಿಷ ಬಿಟ್ಟು, ಆ ಮಾವಿನ ಕಾಯಿಯಿಂದ ಗೊರಟನ್ನು ತೆಗೆದಿಟ್ಟು, ಬೇಯಿಸಲು ಬಳಸಿದ ನೀರಿನ್ನು ಬಳಸಿ ಮಾವಿನಕಾಯಿಯ ಪೇಸ್ಟ್ ತಯಾರಿಸಿಕೊಳ್ಳಿ. ಪೇಸ್ಟ್‌ ತಯಾರಿಸುವಾಗ ಹೆಚ್ಚು ನೀರು ಬಳಸಬೇಡಿ. ಅಲ್ಲದೇ ಪೇಸ್ಟ್ ತಯಾರಿಸುವಾಗ ಮಾವಿನ ಕಾಯಿ ಮಿಶ್ರಣಕ್ಕೆ ಸಕ್ಕರೆ, ಉಪ್ಪು, 5 ಪುದೀನಾ ಎಲೆ ಸೇರಿಸಿ, ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಒಂದು ಗ್ಲಾಸ್‌ಗೆ ಐಸ್ ಕ್ಯೂಬ್ಸ್, ಅರ್ಧ ಚಮಚ, ಹುರಿದು ಪುಡಿ ಮಾಡಿದ ಜೀರಿಗೆ, ಚಿಟಿಕೆ ಕೆಂಪುಪ್ಪು ಮತ್ತು ಎರಡು ಸ್ಪೂನ್ ತಯಾರಿಸಿಟ್ಟುಕೊಂಡ ಮಾವಿನ ಕಾಯಿ ಪೇಸ್ಟ್ ಹಾಕಿ  ಇದಕ್ಕೆ ತಂಪು ನೀರು ಸೇರಿಸಿ, ಮಿಕ್ಸ್ ಮಾಡಿದ್ರೆ ಆಮ್ ಪನ್ನಾ ರೆಡಿ.

ಮೂರನೇಯದಾಗಿ ಜೀರಾ ಸೋಡಾ. ಒಂದು ಗ್ಲಾಸ್‌ಗೆ 4ರಿಂದ 5 ಐಸ್ ಕ್ಯೂಬ್ಸ್, ಅರ್ಧ ಚಮಚ ಜಲಜೀರಾ ಪುಡಿ, ಚಿಟಿಕೆ ಕೆಂಪುಪ್ಪು, ಅಗತ್ಯಕ್ಕೆ ತಕ್ಕಷ್ಟು ಸ್ಪ್ರೈಟ್ ಸೇರಿಸಿದರೆ, ಜೀರಾ ಸೋಡಾ ರೆಡಿ. ಮನೆಗೆ ಗೆಸ್ಟ್ ಬಂದಾಗ, ನೀವು ಈ ಪಾನೀಯವನ್ನ ಮಾಡಿ ಕೊಡಲು ಸುಲಭ.

ನಾಲ್ಕನೇಯದಾಗಿ  ಕಲ್ಲಂಗಡಿ ಶರ್ಬತ್. ಜ್ಯೂಸ್ ಜಾರ್‌ಗೆ ಒಂದು ಕಪ್ ಕಲ್ಲಂಗಡಿ ಹಣ್ಣಿನ ತುಂಡುಗಳನ್ನ ಹಾಕಿ, ಅದಕ್ಕೆ 5ರಿಂದ 6 ಪುದೀನಾ ಎಲೆ, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ, ಚಿಟಿಕೆ ಚಾಟ್‌ ಮಸಾಲಾ ಪುಡಿ ಸೇರಿಸಿ, ಜ್ಯೂಸ್ ತಯಾರಿಸಿ. ಒಂದು ಗ್ಲಾಸ್‌ಗೆ ಐಸ್‌ಕ್ಯೂಬ್ಸ್ ಹಾಕಿ, ಅದಕ್ಕೆ ಈ ಜ್ಯೂಸ್ ಸೇರಿಸಿದ್ರೆ ಕಲ್ಲಂಗಡಿ ಶರ್ಬತ್ ರೆಡಿ. ನಿಮಗೆ ಬೇಕಾದಲ್ಲಿ ಒಂದು ಸ್ಪೂನ್ ನಿಂಬೆ ರಸ ಸೇರಿಸಿಕೊಳ್ಳಿ.

- Advertisement -

Latest Posts

Don't Miss