ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಆರೋಗ್ಯಕರವಾದ, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಮಸಾಲಾ ಮಜ್ಜಿಗೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಕಪ್ ಮೊಸರು, ಒಂದು ಸ್ಪೂನ್ ಎಣ್ಣೆ, ಜೀರಿಗೆ, ಹಸಿ ಮೆಣಸು, ಕೊತ್ತೊಂಬರಿ ಸೊಪ್ಪು,ಕರಿಬೇವಿನ ಸೊಪ್ಪು, ಚಿಕ್ಕ ತುಂಡು ಶುಂಠಿ, ಅಗತ್ಯಕ್ಕೆ ತಕ್ಕಷ್ಟು ಜೀರಿಗೆ ಪುಡಿ, ಪೆಪ್ಪರ್ ಪುಡಿ, ಕೆಂಪುಪ್ಪು ಮತ್ತು ಸಾಧಾರಣ ಉಪ್ಪು, ನೀರು. ಇವಿಷ್ಟು ಮಸಾಲಾ ಮಜ್ಜಿಗೆ ಮಾಡಲು ಬೇಕಾಗುವ ಸಾಮಗ್ರಿ.
ಒಂದು ಮಿಕ್ಸಿ ಜಾರ್ಗೆ ನಾಲ್ಕರಿಂದ 5 ಪುದೀನಾ ಎಲೆ, ಕೊತ್ತೊಂಬರಿ ಸೊಪ್ಪು, ಒಂದು ಅಥವಾ ಅರ್ಧ ಹಸಿ ಮೆಣಸಿನಕಾಯಿ, ಚಿಕ್ಕ ತುಂಟು ಶುಂಠಿ ಹಾಕಿ, ತರಿ ತರಿಯಾಗಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ಗೆ ಮೊಸರು, ಉಪ್ಪು, ಕೆಂಪುಪ್ಪು, ಜೀರಿಗೆ ಪುಡಿ, ಪೆಪ್ಪರ್ ಪುಡಿ, ಅರ್ಧ ಗ್ಲಾಸ್ ನೀರು ಸೇರಿಸಿ. ಮತ್ತೊಮ್ಮೆ ಬ್ಲೆಂಡ್ ಮಾಡಿದ್ರೆ ಮಸಾಲಾ ಮಜ್ಜಿಗೆ ರೆಡಿ.