Thursday, October 17, 2024

Latest Posts

Summer Special: ನಿಮ್ಮ ಮನೆಯಲ್ಲಿ ಈ ಗಿಡ ಇದ್ರೆ ನಿಮಗೆ ಮೇಕಪ್‌ ಕಿಟ್ ಬೇಡವೇ ಬೇಡಾ..

- Advertisement -

ಆರೋಗ್ಯಕರ ಗುಣಗಳನ್ನು ಹೊಂದಿರುವ ಹಲವಾರು ಗಿಡಗಳ ಬಗ್ಗೆ ನಾವು ಕೇಳಿರುತ್ತೇವೆ. ಅಂಥ ಗಿಡಗಳಲ್ಲಿ ಒಂದು ಗಿಡದ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಈ ಗಿಡ ನಿಮ್ಮ ಮನೆಯಲ್ಲಿದ್ರೆ, ನೀವು ನಿಮ್ಮ ಸೌಂದರ್ಯದ ಬಗ್ಗೆ ಟೆನ್ಶನ್ ತೊಗೋಳೋದೇ ಬೇಡ. ನಿಮ್ಮ ಬಳಿ ಮೇಕಪ್ ಕಿಟ್ ಇಲ್ಲದಿದ್ರೂ ನಡೆಯತ್ತೆ. ಇದನ್ನ ಬಳಸಿದ್ರೆ ನೀವು ಮೇಕಪ್ ಹಾಕದಿದ್ರೂ ನಡೆಯುತ್ತೆ. ಈ ನ್ಯಾಚುರಲ್ ಟಿಪ್ಸ್ ನಿಮ್ಮನ್ನ ಇನ್ನಷ್ಟು ಅಂದಗಾಣಿಸುತ್ತೆ. ಹಾಗಾದ್ರೆ ಯಾವುದು ಆ ಗಿಡ..? ಆ ಗಿಡದಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಆರೋಗ್ಯಕರ, ಸೌಂದರ್ಯಕರ ಗುಣವನ್ನ ಹೊಂದಿರುವ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ನೀಡುವ ಗಿಡ ಅಂದ್ರೆ ಆ್ಯಲೋವೆರಾ ಗಿಡ. ನಿಮ್ಮ ಮುಖ ಡಲ್ಲಾಗಿದ್ರೆ, ನಿಮ್ಮ ಮುಖದ ಮೇಲೆ ಮೊಡವೆ, ಮೊಡವೆ ಕಲೆ ಇದ್ರೆ, ನಿಮ್ಮ ಚರ್ಮದ ಮೇಲೆ ಗುಳ್ಳೆಗಳಾಗಿದ್ರೆ, ಸುಟ್ಟ ಕಲೆಗಿದ್ರೆ ನೀವು ಆ್ಯಲೋವೆರಾ ಜೆಲ್ ಬಳಸಿ. ಆ್ಯಲೋವೆರಾ ಗಿಡದಿಂದ ಫ್ರೆಶ್ ಜೆಲ್ ತೆಗೆದು ಈ ಎಲ್ಲ ಕಲೆಗಳ ಮೇಲೆ ಪ್ರತಿದಿನ ಹಚ್ಚುತ್ತ ಬಂದ್ರೆ ಒಂದು ವಾರದಲ್ಲೇ ನಿಮ್ಮ ತ್ವಚೆ ಕ್ಲೀನ್ ಆಗಿರತ್ತೆ.

ನಿಮಗೆ ಕೂದಲು ಉದುರುವ ಸಮಸ್ಯೆ ಇದ್ರೆ, ನೀವು ತಲೆ ಸ್ನಾನ ಮಾಡುವ ಒಂದು ಗಂಟೆ ಮುಂಚೆ, ನಿಮ್ಮ ಕೂದಲ ಬುಡಕ್ಕೆ ಆ್ಯಲೋವೆರಾ ಜೆಲ್ ಹಚ್ಚಿಕೊಂಡು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲ ಬುಡ ಗಟ್ಟಿಗೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಸಿಲ್ಕಿ ಸ್ಮೂತ್ ಆಗುತ್ತದೆ.

ಇನ್ನು ನಿಮ್ಮ ಹಿಮ್ಮಡಿ ಒಣಗಿದ್ದರೆ, ನೀವು ಪ್ರತಿದಿನ ರಾತ್ರಿ ಆ್ಯಲೋವೆರಾ ಜೆಲ್‌ನ ಹಿಮ್ಮಡಿಗೆ ಹಚ್ಚಿ ಮಲಗಿ, ಒಂದು ವಾರದಲ್ಲಿ ನಿಮ್ಮ ಹಿಮ್ಮಡಿ ಸುಂದರವಾಗುತ್ತದೆ. ಆ್ಯಲೋವೆರಾ ಜ್ಯೂಸ್ ಕುಡಿಯುವುದರಿಂದಲೂ, ಆರೋಗ್ಯದಲ್ಲಿ ಮತ್ತು ಸೌಂದರ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಆದ್ರೆ ನೆನಪಿರಲಿ ಗರ್ಭಿಣಿಯರು ಯಾವುದೇ ಕಾರಣಕ್ಕೂ ಆ್ಯಲೋವೆರಾ ಜ್ಯೂಸ್ ಕುಡಿಯಬಾರದು. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು ನಿಮಗೆ ಆ್ಯಲೋವೆರಾ ಬಳಸಿದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.

- Advertisement -

Latest Posts

Don't Miss