Friday, November 14, 2025

Latest Posts

ಜನಜಂಗುಳಿ ಇರುವ ಸ್ಥಳದಲ್ಲಿ ಈ ಅಂಗಡಿ ಹಾಕಿದ್ರೆ ತಿಂಗಳಿಗೆ 30ರಿಂದ 50 ಸಾವಿರ ಗ್ಯಾರಂಟಿ..

- Advertisement -

ನಾವು ಮಾಡುವ ಉದ್ಯಮದಲ್ಲಿ ನಮಗೆ ಲಾಭ ಬರಬೇಕು ಅಂದ್ರೆ, ಉತ್ತಮ ಬಂಡವಾಳ ಹಾಕ್ಬೇಕು. ಒಳ್ಳೆ ಏರಿಯಾದಲ್ಲಿ ಅಂಗಡಿ ಇಡ್ಬೇಕು. ಕೆಲಸಕ್ಕೆ ಜನರನ್ನ ಇಟ್ಟುಕೊಳ್ಬೇಕು ಹೀಗೆ ಇತ್ಯಾದಿ ಇತ್ಯಾದಿ ರೂಲ್ಸ್‌ಗಳಿದೆ. ಆದ್ರೆ ನಾವಿವತ್ತು ಹೇಳೋ ಉದ್ಯಮ ಶುರು ಮಾಡೋಕ್ಕೆ ನೀವು ಕಡಿಮೆ ಬಂಡವಾಳ ಹಾಕಬಹುದು. ಮತ್ತು ಈ ಕೆಲಸಕ್ಕೆ ನಿಮಗೆ ಅಂಗಡಿ ಇಡಬೇಕಂತಿಲ್ಲ. ಬದಲಾಗಿ ಒಂದು ಗಾಡಿ ಇದ್ದರೆ ಸಾಕು. ಹಾಗಾದ್ರೆ ಇದು ಯಾವ ಉದ್ಯಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಾವಿವತ್ತು ಹೇಳ್ತಾ ಇರೋ, ಕಡಿಮೆ ಬಂಡವಾಳ, ಹೆಚ್ಚು ಲಾಭದ ಉದ್ಯಮ ಅಂದ್ರೆ, ಫ್ರೂಟ್ ಸಲಾಡ್ ಅಂಗಡಿ. ಹೌದು ನಿಮ್ಮ ಬಳಿ ಒಂದು ತಳ್ಳೋ ಗಾಡಿ, ಗಾಜಿನ ಡಬ್ಬ, 5ರಿಂದ 6 ಥರದ ಹಣ್ಣು ಇದ್ರೆ ಸಾಕು. ಆಫೀಸುಗಳಿರುವ ಜಾಗದಲ್ಲಿ, ಜನಜಂಗುಳಿ ಇರುವ ಪ್ರದೇಶದಲ್ಲಿ ನೀವು ಈ ಅಂಗಡಿ ಇಟ್ರೆ, ಲಾಭ ಸಿಗೋದು ಗ್ಯಾರಂಟಿ.

ಯಾಕಂದ್ರೆ ಟೀ ಬ್ರೇಕ್, ತಿಂಡಿ ಬ್ರೇಕ್ ಇದ್ದಾಗ, ಬೇಸಿಗೆ ಗಾಲದಲ್ಲಿ ಜನ ಫ್ರೂಟ್ಸ್ ತಿನ್ನೋಕ್ಕೆ ಬರ್ತಾರೆ. ಕಲ್ಲಂಗಡಿ, ಪಪ್ಪಾಯಿ, ಬಾಳೆಹಣ್ಣು, ಮಸ್ಕ್‌ಮೆಲನ್, ಸೇಬುಹಣ್ಣು, ಇವಿಷ್ಟು ಹಣ್ಣುಗಳನ್ನು ಕತ್ತರಿಸಿ ಬಾಲ್ ಮಾಡಿ. ನೀವು ಒಂದು ಬೌಲ್ ಹಣ್ಣಿಗೆ 30 ರಿಂದ 35 ರೂಪಾಯಿಯಂತೆ ಮಾರಿದ್ರೆ. ನಿಮ್ಮ ಅಂಗಡಿಗೆ ಇಡೀ ದಿನ 30 ರಿಂದ 50 ಜನ ಬಂದ್ರೆ, ದಿನಕ್ಕೆ ಸಾವಿರದಿಂದ 2 ಸಾವಿರದವರೆಗೂ ದುಡ್ಡು ಗಳಿಸುತ್ತೀರಿ. ಅಂದ್ರೆ ತಿಂಗಳಿಗೆ 30 ಸಾವಿರಕ್ಕೂ ಹೆಚ್ಚು ಗಳಿಕೆ.

ಆದ್ರೆ ಬರೀ ಹಣ್ಣು ಕತ್ತರಿಸಿ ಕೊಡೋದಷ್ಟೇ ನಿಮ್ಮ ಕೆಲಸವಲ್ಲ. ಬದಲಾಗಿ ಆ ಸ್ಥಳದಲ್ಲಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು. ಕೈಗೆ ಗ್ಲೌಸ್ ಧರಿಸಿ, ಸ್ವಚ್ಛವಾಗಿ ಹಣ್ಣಿನ ಬೌಲ್ ತಯಾರಿಸಿ ಕೊಡಬೇಕು. ಹಣ್ಣಿನ ಸಿಪ್ಪೆಯನ್ನ ಅಲ್ಲೇ ಎಸಿಯದೇ, ಒಂದು ಚೀಲದಲ್ಲಿ ತುಂಬಿಸಿಡಬೇಕು. ಬಂದವರಿಗೆ ಅಲ್ಲಿ ನಿಂತು ಹಣ್ಣು ತಿನ್ನಲು ಯಾವುದೇ ಕಸಿವಿಸಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಬಂದವರೊಂದಿಗೆ ವಿನಯದಿಂದ ಮಾತನಾಡಬೇಕು. ಆಗಷ್ಟೇ ನೀವು ನಿಮ್ಮ ಕೆಲಸದಲ್ಲಿ ಲಾಭ ಗಳಿಸಲು ಸಾಧ್ಯ.

- Advertisement -

Latest Posts

Don't Miss