ಹಲವು ಮಹಿಳಾ ಮಣಿಗಳಿಗೆ ಇಷ್ಟವಾಗುವ ಜೀ ಕನ್ನಡದ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ಸ್ವಪ್ನಾ ಕೃಷ್ಣಾ, ಕರ್ನಾಟಕ ಟಿವಿಯೊಂದಿಗೆ ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಾಲ್ಯವನ್ನು ಹೇಗೆ ಕಳೆದರು..? ಫಿಲ್ಮ್ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ನಿರ್ದೇಶನ ಮಾಡೋದನ್ನ ಕಲಿತಿದ್ದು ಹೇಗೆ..? ಇಷ್ಟೆಲ್ಲಾ ವಿಷಯಗಳ ಬಗ್ಗೆ ಸ್ವಪ್ನಾ ಕೃಷ್ಣಾ ಮಾತನಾಡಿದ್ದಾರೆ.
ತಾತ ತೀರಿಕೊಂಡರು, ಅಜ್ಜಿ ತಮ್ಮ ಮಕ್ಕಳನ್ನ ಚೆನ್ನಾಗಿ ಬೆಳೆಸಿದ್ದರು. ಅವರು ತುಂಬಾ ಸ್ಟ್ರಾಂಗ್. ನಾನು ಅವರ ಜೊತೆಗೆ ಬೆಳೆದಿದ್ದು ಅಂತಾ ಮಾತು ಆರಂಭಿಸಿದ ನಿರ್ದೇಶಕಿ ಸ್ವಪ್ನಾ ಕೃಷ್ಣ, ಹೇಗೆ ಅವರು ಕೂಡ ಇಷ್ಟು ಸ್ಟ್ರಾಂಗ್ ಆದ್ರು ಅಂತಾ ಹೇಳಿದ್ದಾರೆ. ಅಮ್ಮನ, ಅಜ್ಜಿಯ ಧೈರ್ಯ ಪಡೆದು ಬೆಳೆದ ಸ್ವಪ್ನಾ ಓದಿದ್ದು ಕಡಿಮೆ, ಪಿಯುಸಿ ಹತ್ತಿರವಾಗ್ತಿದ್ದಂತೆ, ಸ್ವಪ್ನಾ ನಟನಾ ರಂಗಕ್ಕೆ ಕಾಲಿಟ್ರು.
ಅದು ಕೂಡ ಬಯಸಿ ಬಯಸಿ ಬಂದಿದ್ದಲ್ಲ, ಬದಲಾಗಿ ಒಮ್ಮೆ ಟ್ರೈ ಮಾಡೋಣಾ ಅಂತಾ ಬಂದ್ರಷ್ಟೆ. ಲಕ್ ಖುಲಾಯಿಸೇ ಬಿಡ್ತು. ದಂಡಪಿಂಡಗಳು ಸಿರಿಯಲ್‌ನಲ್ಲಿ ನಟಿಸಿದ್ರು. ನಂತರ ಓದು ಮೊಟಕುಗೊಳಿಸಿ, ನಟನಾ ಕ್ಷೇತ್ರದಲ್ಲೇ ಮುಂದುವರಿಯಬೇಕೆಂದು ನಿರ್ಧರಿಸಿದರು. ಅವರು ನಟನೆ ಮಾಡಿ ಗಳಿಸಿದ ಹಣವನ್ನ ತಂಗಿ ಓದಿಗೆ ಖರ್ಚು ಮಾಡಿ, ಅವರನ್ನ ಎಜುಕೇಟೆಡ್ ಆಗಿ ಮಾಡಿದ್ದಾರೆ. ಅವರ ಲೈಫ್ ಸೆಟ್ಲ್ ಆಗಿದ್ದರ ಬಗ್ಗೆ ಸ್ವಪ್ನಾ ಖುಷಿ ಖುಷಿಯಾಗಿ ಮಾತನಾಡಿದ್ದಾರೆ.
ಸ್ವಪ್ನಾ ಪ್ರಕಾರ, ನಾವೆಷ್ಟೇ ವಿದ್ಯೆ ಕಲಿತರೂ, ನಾವೆಷ್ಟೇ ದುಡಿದರೂ, ನಮ್ಮ ಮುಂದೆ ಇದ್ದವರ, ನಮ್ಮ ಜನರ ಕಷ್ಟವನ್ನ, ಅವರ ಮನಸ್ಸಿನ ಮಾತನ್ನ ನಾವು ಅರ್ಥ ಮಾಡಿಕೊಳ್ಳದಿದ್ದರೆ, ನಾವೆಷ್ಟೇ ಕಲಿತರೂ, ನಾವೆಷ್ಟೇ ದುಡಿದರೂ ಅದು ವ್ಯರ್ಥ ಎಂದು ಹೇಳಿದ್ದಾರೆ. ಇನ್ನು ನಿರ್ದೇಶಕಿಯಾಗಿ ತಮ್ಮ ಅನುಭವ ಹೇಗಿದೆ ಅನ್ನೋ ಬಗ್ಗೆಯೂ ಸ್ವಪ್ನ ಮಾತನಾಡಿದ್ದಾರೆ. ಆ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.