Wednesday, January 15, 2025

Latest Posts

ಇದು ಕೃಷ್ಣಾ- ಸ್ವಪ್ನಾ ಲವ್ ಸ್ಟೋರಿ: ಲೈಫ್ ಜರ್ನಿ ನೆನೆದ ನಿರ್ದೇಶಕಿ..

- Advertisement -

ನಿರ್ದೇಶಕಿ ಸ್ವಪ್ನಾ ಕೃಷ್ಣಾ ತಮ್ಮ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಹೇಗೆ ನಿರ್ದೇಶಕರಾಗಿದ್ದು, ಈ ಕೆಲಸ ಮಾಡಲು ಕೃಷ್ಣಾ ಅವರು ಎಷ್ಟು ಸಪೋರ್ಟ್ ಮಾಡಿದ್ರು ಅಂತಾ ಸ್ವಪ್ನಾ ಹೇಳಿದ್ದಾರೆ.

ಕೃಷ್ಣಾ ಅವರು ಸ್ವಪ್ನಾರನ್ನ ಮದುವೆಯಾಗುವಾಗ ಸ್ವಪ್ನಾರಿಗೆ 21 ವರ್ಷ ವಯಸ್ಸು. ಇವರು ಮೊದಲು ಸಪ್ತಪದಿ ಅನ್ನೋ ಶೋನಲ್ಲಿ ಮೀಟ್ ಮಾಡಿದ್ದು, ಇದೇ ಸ್ನೇಹ ಪ್ರೀತಿಯಾಗಿ ತಿರುಗಿತು. ನಂತರ ಸ್ವಪ್ನಾ ಮತ್ತು ಕೃಷ್ಣಾ ವಿವಾಹವಾಗಿದ್ದು. ಇದಾದ ಬಳಿಕ, ಸ್ವಪ್ನ ಕೂಡ ಓರ್ವ ಒಳ್ಳೆಯ ನಿರ್ದೇಶಕಿಯಾಗಬಲ್ಲಳು ಅಂತಾ ಗುರುತಿಸಿದ್ದೇ ಕೃಷ್ಣ ಅವರು. ಮೊದಲ ಬಾರಿ ನೀನು ಡೈರೆಕ್ಟ್ ಮಾಡು ಅಂದಾಗ, ಸ್ವಪ್ನಾ ಆಶ್ಚರ್ಯಗೊಂಡರಂತೆ.

ಆಗ ಕೃಷ್ಣಾ ಅವರು ನಿನ್ನಿಂದ ಈ ಕೆಲಸ ಮಾಡೋಕ್ಕೆ ಖಂಡಿತ ಸಾಧ್ಯವಾಗತ್ತೆ ಅಂತಾ ಬೆನ್ನು ತಟ್ಟಿ ಸಪೋರ್ಟ್ ಮಾಡಿ, ನಿರ್ದೇಶನ ಮಾಡಲು ಸಲಹೆ ನೀಡಿದರಂತೆ. ನಾನು ಇಲ್ಲಿ ಕೂತು ಹೀಗೆ ಹೆಮ್ಮೆಯಿಂದ ಮಾತನಾಡಲು ಕೃಷ್ಣಾ ಅವರೇ ಕಾರಣ. ಅವರೇ ನನ್ನ ಬೆನ್ನೆಲುಬು. ಅವರೇ ಸಪೋರ್ಟ್ ಮಾಡಿ, ನಾನು ನಿರ್ದೇಶಕಿಯಾಗುವಂತೆ ಮಾಡಿದರು. ನಾನು ಕೃಷ್ಣಾ ಅವರ ಪತ್ನಿ, ನನ್ನ ಹೆಸರಿನ ಮುಂದೆ ಕೃಷ್ಣ ಅನ್ನೋ ಹೆಸರಿದೆ ಅನ್ನೋಕ್ಕೆ ನನಗೆ ಹೆಮ್ಮೆ ಇದೆ ಎಂದು ಸ್ವಪ್ನಾ ಹೇಳಿದ್ದಾರೆ.

ಇನ್ನು ಧಾರಾವಾಹಿ ನಿರ್ದೇಶನದ ಬಗ್ಗೆ ಮಾತನಾಡಿದ ಸ್ವಪ್ನಾ, ನಾನು ಮೊದಲು ಗಂಗಾ ಸಿರಿಯಲ್ ಡೈರೆಕ್ಷನ್ ಮಾಡಿದ್ದೆ. ನಂತರ ಸುಬ್ಬಲಕ್ಷ್ಮೀ ಸಂಸಾರ, ಅದಾದ ಬಳಿಕ ಈಗ ಸತ್ಯಾ ಅಂತಾ ಹೇಳಿದ್ರು. ಇನ್ನು ಸತ್ಯಾ ಸಿರಿಯಲ್ ಪ್ರೇಕ್ಷಕರ ಮನ ಗೆದ್ದಿದ್ದು, ಈ ಬಗ್ಗೆ ಸ್ವಪ್ನಾ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಡೈರಕ್ಟ್ ಮಾಡಿದ ಒಂದೊಂದು ಧಾರಾವಾಹಿಯಲ್ಲೂ ಒಂದೊಂದು ವಿಭಿನ್ನ ಪಾತ್ರವಿತ್ತು.

ಗಂಗಾ ಧಾರಾವಾಹಿಯಲ್ಲಿ ಗಂಗಾಳ ಪಾತ್ರವೇ ಬೇರೆ. ಸುಬ್ಬಲಕ್ಷ್ಮೀ ಸಂಸಾರದಲ್ಲಿ ಆಕೆಯ ಪಾತ್ರ ನೊಂದ ಮಹಿಳೆಯದ್ದು. ಇನ್ನು ಸತ್ಯಾ ಧಾರಾವಾಹಿಯಲ್ಲಿ ಟಾಮ್‌ಬಾಯ್ ಪಾತ್ರದಲ್ಲಿ ಹಿರೋಯಿನ್ ಮಿಂಚಿದ್ದಾರೆ. ಹೀಗೆ ಪ್ರತೀ ಧಾರಾವಾಹಿಯಲ್ಲೂ ನಾನು ವೆರೈಟಿ ಇಟ್ಟಿದ್ದೇನೆ. ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗಿದ್ದು ಸತ್ಯ ಸಿರಿಯಲ್ ಡೈರೆಕ್ಷನ್. ಯಾಕಂದ್ರೆ ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಸ್ವಪ್ನಾ ಹೇಳಿದ್ದಾರೆ.

- Advertisement -

Latest Posts

Don't Miss