ಯಾರ್ ಏನೇ ಅಂದ್ರು, ನಾನ್ ಇರೋದೇ ಹಿಂಗೆ. ನನ್ನ ದೇಹಾಕಾರದ ಬಗ್ಗೆ ಮಾತಾಡೋಕ್ಕೆ ಯಾರಿಗೂ ಅರ್ಹತೆ ಇಲ್ಲಾ ಅಂತಾ ಡೈರೆಕ್ಟ್ ಆಗಿ ಹೇಳೋ ನಟಿ ನೀತು, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮ್ಮ ಇಷ್ಟ- ಕಷ್ಟಗಳ ಜೊತೆಗೆ, ಜೀವನದ ಪ್ರಮುಖ ಘಟ್ಟಗಳನ್ನ ಮೆಲುಕು ಹಾಕಿದ್ದಾರೆ. ಅಲ್ಲದೇ, ತಮ್ಮ ಬಗ್ಗೆ ಕಾಮೆಂಟ್ ಮಾಡುವವರಿಗೆ ಉತ್ತರವೂ ಕೊಟ್ಟಿದ್ದಾರೆ.
ನೀವು Foodie ನಾ..? ಅಂತಾ ಕೇಳಿದ್ದಕ್ಕೆ, ನೀತು ಎಸ್. ಚೆನ್ನಾಗಿರೋ ಊಟ ತಿನ್ನದೇ ಬದುಕಿ ಏನ್ ಪ್ರಯೋಜನ ಅಂತಾ ಕೇಳಿದ್ರು. ಅಲ್ಲದೇ ನೀತುಗೆ ಮಂಗಳೂರು ಬದಿಯ ಡಿಶ್ ಅಂದ್ರೆ ತುಂಬಾ ಇಷ್ಟಾ ಅಂತೆ. ಇನ್ನು ನೀವು ಹಾರರ್ ಮೂವಿ ಹೆಚ್ಚು ನೋಡ್ತೀರಾ ಅಂತಾ ಕೇಳಿದ್ದಕ್ಕೆ. ಇಲ್ಲಾ ನಾನು ಮನೆಯಲ್ಲಿ ಅಮ್ಮನ ಜೊತೆನೇ ಮಲಗ್ತೀನಿ. ಅಷ್ಟು ಹೆದರಿಕೆಯಾಗತ್ತೆ. ನನ್ನ ಫ್ರೆಂಡ್ಸ್ ವಾರಕ್ಕೊಂದು ಹಾರರ್ ಮೂವಿ ಹಾಕಿ ನೋಡ್ತಾರೆ. ಅದರ ಸೌಂಡ್ ನನಗೆ ಇರ್ರೀಟೇಟ್ ಮಾಡತ್ತೆ ಅಂತಾ ಹೇಳಿದ್ರು.
ಹಾಗಾದ್ರೆ ನೀವು ಸಿನಿಮಾದಲ್ಲಿ ದೆವ್ವದ ಕ್ಯಾರೆಕ್ಟರ್ ಪ್ಲೇ ಮಾಡಿದ್ರಲ್ಲಾ ಅಂತಾ ನಮ್ಮ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ನೀತು, ಅದು ನಟನೆ ಅಲ್ವಾ. ಅದು ಮಾಡೋಕ್ಕೆ ನನಗೆ ಹೆದರಿಕೆ ಆಗಿಲ್ಲಾ. ಆದ್ರೆ ನಾನು ಸುಮ್ಮನೆ ಲುಕ್ಕು ಕೊಟ್ರೆ ಕೆಲವರು ಹೆದರುತ್ತಾರೆ. ನಾನು ದೆವ್ವದ ಕ್ಯಾರೆಕ್ಟರ್ ಮಾಡಿದಾಗ, ಜನ ನನ್ನನ್ನು ನೋಡಿ ಹೆದರ್ಲಿಲ್ವಲಾ ಅಂತಾ ನನಗೆ ಬೇಜಾರಿದೆ ಅಂತಾ ನೀತು ತುಂಟ ನಗೆ ನಕ್ಕರು.
ಇನ್ನು ನೀವು ತುಂಬಾ ಜಾಲಿ ಪರ್ಸನ್ ಅಂತೆ ಅಂತಾ ಕೇಳಿದ್ದಕ್ಕೆ, ಎಸ್. ನನಗೆ ಇತ್ತೀಚೆಗೆ ಕಾಡಿಗೆ ಹೋಗೋದು, ಮರಗಳ ಮಧ್ಯೆ ಓಡಾಡೋದು ತುಂಬಾ ಇಷ್ಟವಾಗ್ತಿದೆ. ಹೋದ ಜನ್ಮದಲ್ಲಿ ನಾನು ಚಿಟ್ಟೆ ಅಥವಾ ಹಕ್ಕಿಯಾಗಿದ್ದೆ ಅಂತಾ ಕಾಣತ್ತೆ ಅಂತಾ ನೀತು ಕಿರುನಗೆ ಬೀರಿದ್ರು. ಇನ್ನು ನೀವು ಫೈವ್ ಸ್ಟಾರ್ ಹೊಟೇಲ್‌ನಲ್ಲಷ್ಟೇ ಊಟ ಮಾಡೋದು ಅಂತಾ ಹೇಳಿದಾಗ. ಹೇ ಚಾನ್ಸೇ ಇಲ್ಲಾ. ನಾನು ಚಿಕ್ಕ ಚಿಕ್ಕ ಹೊಟೇಲನಲ್ಲೂ ತಿಂಡಿ ತಿಂದಿದ್ದೇನೆ. ನಾನು ನನ್ನ ಗೆಳೆಯರೆಲ್ಲ ಸೇರಿ ದೂರ ತಿರುಗಲು ಹೋದಾಗ, ಅಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಹೊಟೇಲ್‌ನಲ್ಲಿ ಟೀ ಕುಡಿತೇವೆ. ಫುಡ್ ಸ್ಟ್ರೀಟ್‌ಗೆ ಹೋಗಿ ತಿಂತೇನೆ ಅಂತಾ ಹೇಳಿದ್ರು..