Thursday, October 16, 2025

Latest Posts

ಆ್ಯಂಕರ್ ಆಗ್ಬೇಕಿತ್ತು ಆ್ಯಕ್ಟರ್ ಆದೆ: ನಟಿ ಲಾಸ್ಯಾ ನಾಗರಾಜ್..

- Advertisement -

ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ಬರೀ ನೃತ್ಯಗಾರ್ತಿಯಾಗಿದ್ದ ಲಾಸ್ಯಾ ನಟನೆ ಕಲಿತಿದ್ದು ಹೇಗೆ..? ನ್ಯೂಸ್ ಆ್ಯಂಕರ್‌ ಆಗ್ಬೇಕಿದ್ದ ಲಾಸ್ಯಾಗೆ ನಟನೆ ಸೆಳೆದಿದ್ದು ಹೇಗೆ..? ಈ ಎಲ್ಲಾ ವಿಷಯದ ಬಗ್ಗೆ ಲಾಸ್ಯಾ ಮಾತನಾಡಿದ್ದಾರೆ.

ಲಾಸ್ಯಾ ನಾಗರಾಜ್ ಓದಿದ್ದು ಜರ್ನಲಿಸಂ. ಅವರಿಗೆ ನ್ಯೂಸ್ ಆ್ಯಂಕರ್ ಆಗ್ಬೇಕು ಅನ್ನೋ ಆಸೆ ಇತ್ತು. ಇನ್ನು ಅವರ ತಂದೆಗೆ ಬಿಬಿಸಿ ನ್ಯೂಸ್‌ನಲ್ಲಿ ತಮ್ಮ ಮಗಳು ನ್ಯೂಸ್ ಓದಬೇಕು ಅನ್ನೋ ಆಸೆ ಇತ್ತು. ಆದ್ರೆ ಲಾಸ್ಯಾ ಬಂದಿದ್ದು ಮಾತ್ರ ಆ್ಯಕ್ಟಿಂಗ್ ಫೀಲ್ಡ್‌ಗೆ. ಲಾಸ್ಯಾರ ತಾಯಿ ಕ್ಲಾಸಿಕಲ್ ಡಾನ್ಸರ್ ಆಗಿದ್ದು, ಲಾಸ್ಯಾರಿಗೆ ನೃತ್ಯ ಒಲಿದಿತ್ತು. ಹಾಗಾಗಿ ನಾನು ಡಾನ್ಸ್ ಮಾಡ್ತೀನಿ. ಆದ್ರೆ ಆ್ಯಕ್ಟ್ ಮಾತ್ರ ಮಾಡಲ್ಲಾಪ್ಪಾ ಅಂತಾ ಲಾಸ್ಯಾ ಹೇಳ್ತಿದ್ರು.

ಸಿನಿಮಾದಲ್ಲಿ ಆ್ಯಕ್ಟ್ ಮಾಡುವ ಸಮಯದಲ್ಲಿ ಪ್ರನಟ ಕಾಶ್ ಬೆಳವಾಡಿ ಅವರು ಲಾಸ್ಯಾ ಅವರಿಗೆ ನಟನೆ ಹೇಳಿ ಕೊಡ್ತಿದ್ರು. ಆದ್ರೆ ಲಾಸ್ಯಾಗೆ ಅದ್ಯಾವುದು ಅಷ್ಟು ಸುಲಭವಾಗಿ ಅರ್ಥವಾಗ್ತಿರ್ಲಿಲ್ಲಾ. ಯಾಕಂದ್ರೆ ನಟನೆ ಅಂದ್ರೆ ನಾವಂದುಕೊಂಡಷ್ಟು ಸುಲಭವಾಗಿರ್ಲಿಲ್ಲಾ. ಎಕ್ಸ್‌ಪ್ರೆಶನ್ ಕೊಡೋದು ಸುಲಭವಾದ್ರೂ, ಡೈಲಾಗ್ ಡಿಲೆವರಿ ಅಷ್ಟು ಸುಲಭವಾಗಿರಲಿಲ್ಲ. ಆದ್ರೂ ಕೂಡ ನಟನೆ ಕಲಿತು ಲಾಸ್ಯಾ ಈಗ ಈ ಮಟ್ಟಕ್ಕೆ ಬಂದಿದ್ದಾರೆ. ಲಾಸ್ಯಾರ ಫ್ರೆಂಡ್ಸ್‌ಗೆ ಲಾಸ್ಯಾ ಆ್ಯಕ್ಟ್ರೆಸ್ ಆಗಿದ್ದಾರೆ ಅಂದ್ರೆ ನಂಬೋಕ್ಕೆ ಆಗ್ತಿಲ್ಲ ಅಂತಾ ಹೇಳ್ತಾರೆ ಲಾಸ್ಯಾ.

- Advertisement -

Latest Posts

Don't Miss