Wednesday, July 2, 2025

Latest Posts

ಚಾರ್ಲಿ ಸಿನಿಮಾದಲ್ಲಿ ಪ್ರಮೋದದ್ ಶೆಟ್ಟಿ ನಟಿಸದಿರಲು ಕಾರಣವೇನು..?

- Advertisement -

ನಟ ಪ್ರಮೋದ್ ಶೆಟ್ಟಿ ತಮ್ಮ ಕುಟುಂಬದ ಬಗ್ಗೆ, ತಾವು ಚಿತ್ರರಂಗಕ್ಕೆ ಬಂದ ಬಗ್ಗೆ ಸೇರಿ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಂದು ತಾವು ಯಾಕೆ ಚಾರ್ಲಿ ಸಿನಿಮಾದಲ್ಲಿ ನಟಿಸಿಲ್ಲ. ಮತ್ತು ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಪಾತ್ರ ಮಾಡೋಕ್ಕೆ, ರಕ್ಷಿತ್ ಮತ್ತು ಪ್ರಮೋದ್ ಮಾಡುತ್ತಿರುವ ಕಸರತ್ತೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ.

ಚಾರ್ಲಿ ಸಿನಿಮಾದ ಕಥೆ ಹೇಳುವಾಗಲೇ ಡೈರೆಕ್ಟರ್ ಕಿರಣ್ ರಾಜ್, ಪ್ರಮೋದಣ್ಣ ನಿಮಗೆ ನಮ್ಮ ಸಿನಿಮಾದಲ್ಲಿ ಯಾವುದೇ ಪಾತ್ರವಿಲ್ಲ ಅಂತಾ ತಮಾಷೆಯಾಗಿಯೇ ಹೇಳಿದ್ದ. ನಾನು ಸಿನಿಮಾ ನೋಡಿದ ಮೇಲೆ ನನಗೂ ಹಾಗೆ ಅನ್ನಿಸಿತು. ಯಾಕಂದ್ರೆ ಕಿರಣ್ ರಾಜ್‌ಗೆ ನನಗೊಂದು ಉತ್ತಮವಾದ ಪಾತ್ರವೇ ಕೊಡಬೇಕು ಹೊರತು, ಸಣ್ಣ ಪಾತ್ರ ಕೊಡುವುದು ಬೇಡ ಅನ್ನೋ ಆಸೆ ಇತ್ತು. ಹಾಗಾಗಿ ಚಾರ್ಲಿ ಸಿನಿಮಾದಲ್ಲಿ ನನಗಾಗಿ ಯಾವ ಪಾತ್ರವೂ ಇರಲಿಲ್ಲ ಅಂತಾ ಪ್ರಮೋದ್ ಹೇಳಿದ್ದಾರೆ.

ಇನ್ನು ರಕ್ಷಿತ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಸೇರಿ ತೂಕ ಇಳಿಸುವ ಪ್ಲಾನ್‌ನಲ್ಲಿ ಇದ್ದಾರೆ. ಇದಕ್ಕೆ ಕಾರಣವೇನಂದದ್ರೆ, ರಿಚರ್ಡ್ ಆ್ಯಂಟನಿ ಸಿನಿಮಾ ಶೂಟಿಂಗ್ ಶೂರುವಾಗಲಿದ್ದು, ಅದಕ್ಕಾಗಿ ಈ ತಯಾರಿ ನಡೆದಿದೆ. ಲಾಫಿಂಗ್ ಬುದ್ಧ ಸಿನಿಮಾಗಾಗಿ ಪ್ರಮೋದ್ ಮತ್ತು ಸಪ್ತಸಾಗರದಾಚೆ ಸಿನಿಮಾಗಾಗಿ ರಕ್ಷಿತ್ ವೇಟ್ ಗೇನ್ ಮಾಡಿದ್ದು, ಇವೆರಡರ ಶೂಟಿಂಗ್ ಮುಗಿದ ಬಳಿಕ, ಇಬ್ಬರೂ ಸೇರಿ ವೇಟ್ ಲಾಸ್ ಮಾಡಲಿದ್ದಾರೆ.

ಇನ್ನು ಲಾಫಿಂಗ್ ಬುದ್ಧ ಸಿನಿಮಾ ಬಗ್ಗೆ ಮಾತನಾಡಿದ ಪ್ರಮೋದ್ ಇದೊಂದು ಪೊಲೀಸ್ ಜೀವನದಲ್ಲಿ ನಡೆಯುವ ಕಥೆ. ಇದರಲ್ಲಿ ಒಂದು ಅರ್ಥಪೂರ್ಣವಾದ ಸಂದೇಶವನ್ನ ಕೂಡ ನೀಡಿದ್ದೇವೆ. ಪೊಲೀಸರ ಜೀವನ ಹೇಗಿರತ್ತೆ ಅಂತಾ ತೋರಿಸಿದ್ದೇವೆ ಅಂತಾ ಹೇಳಿದ್ದಾರೆ ಪ್ರಮೋದ್.

- Advertisement -

Latest Posts

Don't Miss