‘ನಿಮ್ಮ ಸ್ಕಿನ್ ಕಲರ್ ಕಪ್ಪಗಿದ್ರೆ ಆ ಬಗ್ಗೆ ಹೆಮ್ಮೆ ಪಡಿ’

ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ತಮ್ಮ ಸ್ಕಿನ್ ಕಲರ್ ಬಗ್ಗೆ ಮಾತನಾಡಿದ್ದು, ನಿಮಗೆ ಯಾವ ಕಲರ್ ಇದೆಯೋ, ಅದರ ಬಗ್ಗೆ ಖುಷಿ ಪಡಿ. ನಿಮ್ಮ ಸ್ಕಿನ್ ಕಲರ್ ಕಪ್ಪಗಿದ್ರೆ, ಆ ಬಗ್ಗೆ ಹೆಮ್ಮೆ ಪಡಿ ಎಂದು ಹೇಳಿದ್ದಾರೆ.

ನಾವು ಯಾವಾಗ ಆ ಬಗ್ಗೆ ಹೆದರಿಕೆ, ಚಳಿ ಬಿಟ್ಟು ಹೊರಬಂದು ನಟಿಸೋಕ್ಕೆ ಶುರು ಮಾಡುತ್ತೋವೋ, ಆಗ ಆ ಹೆದರಿಕೆ ಅದಾಗದೇ ಹೋಗುತ್ತದೆ ಎಂದು ಹೇಳುತ್ತಾರೆ ವಿಜಯ ಲಕ್ಷ್ಮೀ. ಕಪ್ಪು ಸ್ಕಿನ್ ಅನ್ನೋ ಮಾತ್ರಕ್ಕೆ ಹೆಣ್ಣು ಮಕ್ಕಳು ಅಂಜಬೇಡಿ, ನಿಮ್ಮ ಕಲರ್ ಬಗ್ಗೆ ನೀವು ಹೆಮ್ಮೆ ಪಡಬೇಕೇ ವೀನಃ, ಕೀಳರಿಮೆ ಬೆಳೆಸಿಕೊಳ್ಳಬೇಡಿ ಎಂದಿದ್ದಾರೆ ನಕ್ಷತ್ರ.

ಲಕ್ಷಣ ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡಿದ್ದಕ್ಕೆ, ನನಗೆ ಹಲವು ಬೆಂಬಲಿಸುತ್ತಿದ್ದಾರೆ. ಗುರುತಿಸುತ್ತಿದ್ದಾರೆ. ಸಿರಿಯಲ್ ಸೆಟ್‌ನಲ್ಲಿ ನಾನು ಫ್ರೆಶರ್, ಉಳಿದವರೆಲ್ಲ ಒಂದಲ್ಲ ಒಂದು ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡಿದವರೇ ಇದ್ದಾರೆ. ಅವರೆಲ್ಲ ನನಗೆ ತುಂಬಾ ಚೆನ್ನಾಗಿ ಗೈಡ್ ಮಾಡ್ತಾರೆ. ಇದರಲ್ಲಿ ನನಗೆ ನನ್ನ ತಂದೆಯ ಪಾತ್ರ ಇಷ್ಟವಾಗತ್ತೆ. ಯಾಕಂದ್ರೆ ನಾನು ನನ್ನ ತಂದೆ ತಾಯಿಯನ್ನು ಬಿಟ್ಟು ಇರುವುದರಿಂದ, ಈ ಪಾತ್ರ ನನಗೆ ಕನೆಕ್ಟ್ ಆಗತ್ತೆ. ಹಾಗಾಗಿ ನನಗೆ ಸಿಎಸ್ ಪಾತ್ರ ಇಷ್ಟ ಎಂದಿದ್ದಾರೆ ನಕ್ಷತ್ರ.

ಜಗನ್ ಸರ್‌ ಜೊತೆ ಆ್ಯಕ್ಟ್ ಮಾಡೋಕ್ಕೆ ಮೊದಲು ಹೆದರಿಕೆಯಾಗ್ತಿತ್ತು, ಆದ್ರೆ ಅವರು ನನಗರ್ಥವಾಗುವ ರೀತಿಯಲ್ಲಿ ನಟಿಸೋದನ್ನ ಕಲಿಸಿದ್ದಾರೆ. ಹಾಗಾಗಿ ಈಗ ಅವರೊಂದಿಗೆ ಖಷಿ ಖಷಿಯಾಗಿ ಆ್ಯಕ್ಟಿಂಗ್ ಮಾಡ್ತೀನಿ ಅಂತಾರೆ ವಿಜಯಲಕ್ಷ್ಮೀ. ಇನ್ನು ಸುಕೃತಾ ನಾಗ್, ಶೃತಿ ಸೇರಿ ವಿಜಯಲಕ್ಷ್ಮೀಯವರ ಕೋ ಆ್ಯಕ್ಟರ್ಸ್‌ಗಳು ತರ್ಲೆ ತಮಾಷೆ ಮಾಡುತ್ತ ಸೆಟ್‌ನಲ್ಲಿ ಖುಷಿ ಖುಷಿಯಾಗಿರ್ತೀವಿ ಅಂದಿದ್ದಾರೆ ನಕ್ಷತ್ರ.

About The Author