ಕನ್ನಡ ಎಷ್ಟು ಚಂದ ಮಾತನಾಡುತ್ತಾರೆ ನೋಡಿ ನಮ್ಮ ಸತ್ಯ..

ಸತ್ಯ ಅಂತಾನೇ ಖ್ಯಾತಿ ಪಡೆದಿರುವ ನಟಿ ಗೌತಮಿ ಜಾಧವ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತಾವು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ..? ಅವರು ಯಾವ ಕೋರ್ಸ್ ಮಾಡಿದ್ದಾರೆ..? ಇತ್ಯಾದಿ ವಿಷಯಗಳ ಬಗ್ಗೆ ಗೌತಮಿ ಮಾತನಾಡಿದ್ದಾರೆ.

ಗೌತಮಿ ಜಾಧವ್‌ಗೆ ಚಿಕ್ಕಂದಿನಿಂದಲೂ ಡಾನ್ಸ್ ಬಗ್ಗೆ ತುಂಬಾ ಆಸಕ್ತಿ ಇತ್ತಂತೆ. ಹಾಗಾಗಿ ಡಾನ್ಸ್ ಕ್ಲಾಸ್‌ಗೆ ಸೇರಿದ್ರು. ಅಲ್ಲದೇ ಇವರ ತಾಯಿಗೂ ಕೂಡ ಭರತನಾಟ್ಯ ಸೇರಿ ಎಲ್ಲ ರೀತಿಯ ಡಾನ್ಸ್ ಕಲಿಯಬೇಕು ಅನ್ನೋ ಆಸೆ ಇತ್ತಂತೆ. ಆದ್ರೆ ಅದು ಈಡೇರದ ಕಾರಣ, ಗೌತಮಿಯನ್ನು ಡಾನ್ಸ್ ಕ್ಲಾಸ್‌ಗೆ ಸೇರಿಸಿದ್ದರು. ಗೌತಮಿ ಅಮ್ಮನನ್ನು ಎಷ್ಟು ಪ್ರೀತಿಸುತ್ತಾರೆಂದರೆ, ತನಗೆ ಕಾಲೇಜ್ ಹೋಗುವ ಬದಲು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುವ ಆಸೆ ಇದ್ರೂ ಕೂಡ, ತಾಯಿಯ ಆಸೆಯಂತೆ ಡಿಗ್ರಿ ಮುಗಿಸಿ, ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ ಗೌತಮಿ.

ಗೌತಮಿ ಮಾತೃಭಾಷೆ ಮರಾಠಿಯಾಗಿದ್ದರೂ ಕೂಡ ಗೌತಮಿ ಈಗ ನಿರರ್ಗಳವಾಗಿ ಕನ್ನಡ ಮಾತನಾಡುತ್ತಾರೆ. ಸತ್ಯ ಸಿರಿಯಲ್‌ನಲ್ಲಿ ನಟಿಸೋಕ್ಕೂ ಮುನ್ನ, ಇವರ ಮುಖ ಮತ್ತು ಬಾಡಿ ಲ್ಯಾಂಗ್ವೇಜ್ ನೋಡಿ, ಇವರನ್ನು ಸೆಲೆಕ್ಟ್ ಮಾಡಲಾಗಿತ್ತು. ನಂತರ ಸೆಟ್‌ನಲ್ಲಿ ಇವರಿಗೆ ಕನ್ನಡ ಟ್ಯೂಶನ್ ಕೊಟ್ಟು, ಇವರ ಕನ್ನಡವನ್ನು ಇಂಪ್ರೂವ್ ಮಾಡಲಾಯ್ತು.

About The Author