ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ತೂಗುದೀಪ ಶ್ರೀನಿವಾಸ್ ಬಗ್ಗೆ ಮತ್ತು ಇತರ ಹಿರಿಯ ನಟರ ಬಗ್ಗೆ ಮಾತನಾಡಿದ್ದ ದೊಡ್ಡಣ್ಣ, ಈಗ ತಮ್ಮ ಎಜುಕೇಶನ್ ಬಗ್ಗೆ ಮಾತನಾಡಿದ್ದಾರೆ.
ಹಲವು ಸಿಟಿಗಳಲ್ಲಿ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಗಳು ನಡೆಯುತ್ತಿತ್ತು. ಅಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದರು ಬಂದು ನಟಿಸುತ್ತಿದ್ದರು. ದೊಡ್ಡ ದೊಡ್ಡ ಕಲಾವಿದರು ಕೂಡ ಬರುತ್ತಿದ್ದರು. ಅಲ್ಲಿ ತುಂಬಾ ಕಾಂಪಿಟೇಶನ್ ಇರುತ್ತಿತ್ತು. ಅಲ್ಲಿ ವಿನ್ ಆದವರಿಗೆ ಯಾವ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಸರ್ಟಿಫಿಕೇಟ್ ಕೂಡ ಬೇಕಾಗುತ್ತಿರಲಿಲ್ಲ. ಅಷ್ಟು ಒಳ್ಳೆಯ ವೇದಿಕೆಯಾಗಿತ್ತು.
ಇನ್ನು ನಾನು ಹತ್ತನೇ ಕ್ಲಾಸ್‌ನಲ್ಲಿ ಫೇಲ್ ಆದೆ. ಇದಾದ ಬಳಿಕ ನನಗೆ ಐಟಿಐ ಮಾಡಲು ಹೇಳಿದರು. ಮನಸ್ಸಿಲ್ಲದಿದ್ದರೂ ಐಟಿಐ ಕೋರ್ಸ್ ಮಾಡಿದೆ. ಆ ವೇಳೆ ನಮ್ಮ ಕೆಲವು ಗೆಳೆಯರು ಸೇರಿ ಕಲಾ ಸಂಘ ಮಾಡಿದೆವು. ಆ ವೇಳೆ 25ಕ್ಕೂ ಹೆಚ್ಚು ರಂಗಕಲಾ ಸಂಘ ಇತ್ತು. ಒಬ್ಬರಿಗೊಬ್ಬರಿಗೆ ಕಾಂಪಿಟೇಶನ್ ಇತ್ತು. ಮಿತ್ರ ಕಲಾ ಮಂಡಳಿ ಅಂತಾ ಒಂದು ಸ್ಥಳವಿತ್ತು. ಅಲ್ಲಿ ಶಾರದಾ ಮಂದಿರದಲ್ಲಿ ನಾಟಕ ಮಾಡಲಾಗುತ್ತಿತ್ತು.
ಆ ನಾಟಕವನ್ನು ನೋಡಲು ಹಲವರು ಬರುತ್ತಿದ್ದರು. ತುಂಬಾ ಇಂಟರೆಸ್ಟಿಂದ ನಾಟಕ ನೋಡುತ್ತಿದ್ದರು. ಹಾಗಾಗಿ ಅಂಥ ಸ್ಥಳದಲ್ಲಿ ನಾಟಕ ಮಾಡಿ, ಗೆಲ್ಲುವುದೇ ಒಂದು ಸಾಹಸದಂತೆ. ಅಲ್ಲಿ ಗೆದ್ದು ಪ್ರೈಸ್ ತೊಗೊಂಡ್ರೆ, ಪದ್ಮಶ್ರೀ ತೆಗೆದುಕೊಂಡ ಹಾಗೆ ಅಂತಾ ತಮ್ಮ ಹಳೆಯ ದಿನಗಳನ್ನ ಹಿರಿಯ ನಟ ದೊಡ್ಡಣ್ಣ ಮೆಲುಕು ಹಾಕಿದ್ದಾರೆ.




