ಸತ್ಯ ಸಿರಿಯಲ್ನ ನಟಿ ಗೌತಮಿ ಜಾಧವ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ.
1.ನಿಮ್ಮ ಫಸ್ಟ್ ಕ್ರಶ್ ಯಾರು..?
ನನಗೆ ಕ್ರಶ್ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ ಪೇಪರ್ನಲ್ಲಿ ಬಂದಿದ್ದ ಅವರ ಫೋಟೋವನ್ನ ಕಟ್ ಮಾಡಿ ಇಟ್ಕೋಂಡಿದ್ದೆ.
2.ನಿಮಗೆ ಯಾರನ್ನು ಕಂಡ್ರೆ ಭಯ ಆಗತ್ತೆ..? ಅಥವಾ ಹೆಚ್ಚು ಗೌರವಿಸುವ ವ್ಯಕ್ತಿ ಯಾರು..?
ವನದುರ್ಗಾ ಅನ್ನುವ ದೇವಸ್ಥಾನಕ್ಕೆ ನಾನು ಹೋಗುತ್ತೇನೆ. ಅಲ್ಲಿರುವ ಗುರೂಜಿಗೆ ನಾನು ತುಂಬಾ ಗೌರವ ನೀಡುತ್ತೇನೆ.
3.ಇಂಡಸ್ಟ್ರಿಯಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಅಂದ್ರೆ ಯಾರು..?
ಇಂಡಸ್ಟ್ರಿಯಲ್ಲಿ ನನಗೆ ಅಷ್ಟು ಬೆಸ್ಟ್ ಫ್ರೆಂಡ್ಸ್ ಯಾರೂ ಇಲ್ಲಾ. ಇತ್ತೀಚೆಗೆ ಕೃತಿಕಾ ರವೀಂದ್ರ ಅವರು ನನಗೆ ಉತ್ತಮ ಗೆಳತಿಯಾಗಿದ್ದಾರೆ. ಅದನ್ನು ಬಿಟ್ಟು ನನ್ನ ಕಾಲೇಜ್ ಬೆಸ್ಟಿ ನಮೃತಾ ಅಂತಾ ಇದ್ದಾರೆ.
4.ನಿಮ್ಮ ನೆಚ್ಚಿನ ದೇವರು ಯಾರು..?
ವನದುರ್ಗೆ ನನ್ನ ನೆಚ್ಚಿನ ದೇವರು. ನನ್ನ ಮನೆದೇವ್ರು ಅಲ್ಲದಿದ್ದರೂ, ನಾನು ಪಾಲಿಸುವ ದೇವರು. ಮಂಗಳೂರಿನ ಬಿ.ಸಿ ರೋಡಿನಲ್ಲಿ ವನದುರ್ಗೆಯ ದೇವಸ್ಥಾನವಿದೆ. 8 ವರ್ಷದಿಂದ ಸತತವಾಗಿ ಪ್ರತೀ ತಿಂಗಳು ನಾನು ಅಲ್ಲಿಗೆ ಹೋಗಿ ಬರ್ತೇನೆ. ಅಲ್ಲಿ ಹೋದ ಮೇಲೆ ನನ್ನ ಜೀವನದಲ್ಲಿ ಉತ್ತಮವಾದ ವ್ಯತ್ಯಾಸವಾಗಿದೆ.
5.ಯಾರ ಕಾಟವೂ ಬೇಡಾ ಅಂದಾಗ, ನೀವು ಹೋಗುವ ಶಾಂತವಾದ ಸ್ಥಳ ಯಾವುದು..?
ವನದುರ್ಗೆ ದೇವಸ್ಥಾನಕ್ಕೆ ಹೋಗೋಕ್ಕೆ ಇಷ್ಟಪಡ್ತೀನಿ.
6.ನಿಮಗೆ ಯಾವ ವಸ್ತುವಿನ ಮೇಲೆ ಕ್ರೇಜ್ ಇದೆ..?
ಬಟ್ಟೆ ಅಂದ್ರೆ ನನಗೆ ತುಂಬಾ ಇಷ್ಟ.
7.ನಿಮ್ಮನ್ನ ನೋಡಿದ್ರೆ ಜನ ನಿಮ್ಮ ಬಳಿ ಸೆಲ್ಫಿ ಕೇಳೋಕ್ಕೆ ಬರ್ತಾರೆ. ಅದೇ ರೀತಿ ನೀವೂ ಬೇರೊಬ್ಬ ಸೆಲೆಬ್ರಿಟಿ ಜೊತೆ ಸೆಲ್ಫಿ ತೊಗೊಳೋಕ್ಕೆ ಇಷ್ಟಪಟ್ರೆ ಯಾರ ಜೊತೆ ಸೆಲ್ಫಿ ತೆಗೆದುಕೊಳ್ತಿರಾ..?
ನನಗೆ ಹಾಗೆ ಯಾವಾಗ್ಲೂ ಅನ್ನಿಸಿಲ್ಲ.
8.ನೀವು ಯಾವುದಾದರೂ ಕೆಲಸ ಮಾಡಿ, ಇವತ್ತಿಗೂ ನಾನು ಹಾಗೆ ಮಾಡಬಾರದಿತ್ತು ಅನ್ನಿಸುವ ಸನ್ನಿವೇಶ ಯಾವುದು..?
ಮೊದಲೆಲ್ಲಾ ಸುಮಾರು ವಿಷಯಕ್ಕೆ ಬೇಸರವಾಗ್ತಿತ್ತು. ಆದ್ರೆ ಈಗ ನಾನು ಹಾಗೆಲ್ಲಾ ಚಿಕ್ಕ ಚಿಕ್ಕ ವಿಷಯಕ್ಕೆ ಬೇಜಾರ್ ಮಾಡಿಕೊಳ್ಳೋದಿಲ್ಲಾ.
9.ನೀವು ಯಾವಾಗಲಾದ್ರೂ ಫೋರ್ಜರಿ ಸೈನ್ ಹಾಕಿದ್ದೀರಾ..?
ಹೌದು.. ನನ್ನ ತಮ್ಮನ ಡೈರಿಯಲ್ಲಿ, ಅಪ್ಪ ಸೈನನ್ನು ಫೋರ್ಜರಿ ಮಾಡಿ ಹಾಕಿದ್ದೇನೆ.


