ಪಲಾವ್, ರೈಸ್‌ಭಾತ್ ಇದ್ದಲ್ಲಿ ರಾಯ್ತಾ ಇಲ್ಲಾ ಅಂದ್ರೆ ಹೇಗೆ ಹೇಳಿ..? ಪಲಾವ್ ಟೇಸ್ಟ್ ಹೆಚ್ಚಿಸೋದೇ, ಈ ರಾಯ್ತಾ ಕೆಲಸ. ಆದ್ರೆ ನಾವು ನೀವು ಹೊಟೇಲ್‌ನಲ್ಲೂ ತಿಂದಿರದ ಸ್ಪೆಶಲ್ ರಾಯ್ತಾವನ್ನ, ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡ್ಕೋಳಿ.
ಬೇಕಾಗುವ ಸಾಮಗ್ರಿ: ಒಂದು ಕಪ್ ಮೊಸರು, ಒಂದು ಕಪ್ ಕೊಬ್ಬರಿ ತುರಿ, ಎರಡು ಸಣ್ಣಗೆ ಹೆಚ್ಚಿದ ಈರುಳ್ಳಿ, ಎರಡು ಸಣ್ಣಗೆ ಹೆಚ್ಚಿದ ಟೊಮೆಟೋ, ಒಂದು ಸೌತೇಕಾಯಿ, ಒಂದು ಹಸಿ ಮೆಣಸಿನಕಾಯಿ, ಕೊಂಚ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಒಂದು ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ, ಚಿಟಿಕೆ ಜೀರಿಗೆ, ಕರಿಬೇವಿನ ಸೊಪ್ಪು, ಒಣ ಮೆಣಸು, ಉದ್ದಿನ ಬೇಳೆ, ಕಡಲೆಬೇಳೆ.
ಮಾಡುವ ವಿಧಾನ: ಮೊದಲು ಕೊಬ್ಬರಿ ತುರಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಕೊಬ್ಬರಿ ಹಾಲು ರೆಡಿ ಮಾಡಿ. ಈ ತೆಂಗಿನ ಹಾಲನ್ನು ಒಂದು ಬೌಲ್‌ಗೆ ಹಾಕಿ. ಇದಕ್ಕೆ ಮೊಸರು, ಸೌತೇಕಾಯಿ, ಈರುಳ್ಳಿ, ಟೋಮೆಟೋ, ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್, ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಒಗ್ಗರಣೆ ಸೌಟ್‌ಗೆ ಎಣ್ಣೆ, ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು, ಮೆಣಸು ಹಾಕಿ ಒಗ್ಗರಡೆ ರೆಡಿ ಮಾಡಿ, ರಾಯ್ತಾಗೆ ಮಿಕ್ಸ್ ಮಾಡಿದ್ರೆ, ಸ್ಪೆಶಲ್ ರಾಯ್ತಾ ರೆಡಿ.