ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ರಿಲೀಸ್ ಆಗಲಿದೆ. ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ ಹೆಡ್ ಬುಷ್ ಪ್ರಚಾರಕ್ಕೆ ಡಾಲಿ, ಧನಂಜಯ್ ಗೆಟಪ್ನಲ್ಲಿ ದುಬೈಗೂ ಹಾರಿದ್ದಾರೆ. ಈ ಸುದ್ದಿ ಸಖತ್ ವೈರಲ್ ಆಗಿದ್ದು, ಇದಕ್ಕೆ ಜಯರಾಜ್ ಮಗ ಮತ್ತು ಸೊಸೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಈ ಟಾಂಗ್ಗೆ ಇಂಡೈರೆಕ್ಟ್ ಆಗಿಯೇ, ಜಯರಾಜ್ ತಂಗಿ ಸ್ಟೇಟಸ್ ಮೂಲಕ ಚಿತ್ರಕ್ಕೆ ಆಲ್ ದಿನ ಬೆಸ್ಟ್ ಹೇಳಿದ್ದಾರೆ.
ದುಬೈ ಶೇಕ್ಸ್ ಜತೆ ಹೆಡ್ ಬುಷ್ ಆಟ ಆಡಲಿದ್ದಾನೆ ಜಯರಾಜ್ ..
ಹೆಡ್ ಬುಷ್ ಟೀಮ್ಗೆ ಮತ್ತು ಅಗ್ನಿ ಶ್ರೀಧರ್ಗೆ ಇಂಡೈರೆಕ್ಟ್ ಆಗಿ, ಸೊಸೆ ಇಂಪನಾ ಜಯರಾಜ್, ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ಕೈಕೆಳಗಿದ್ದವರು ನಿಮ್ಮ ಹೆಸರನ್ನ ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಂತ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. The king will always remains king ಅಂತ ಬರೆದು ಅವರಂತೆ ಯಾರೂ ಆಗಲು ಸಾಧ್ಯವಿಲ್ಲವೆಂದಿದ್ದಾರೆ.
ಭರ್ಜರಿಯಾಗಿ ನಡೆಯುತ್ತಿದೆ ವಸಿಷ್ಠ ಸಿಂಹ ‘ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್
ಹೆಡ್ ಬುಷ್ ಪ್ರಚಾರಕ್ಕಾಗಿ ಜಯರಾಜ್ ಗೆಟಪ್ಪಿನಲ್ಲಿ ಡಾಲಿ ಧನಂಜಯ ಓಡಾಡ್ತಿರೋ ಈ ಸಂದರ್ಭದಲ್ಲಿ ಇಂಪನ ಅಜಿತ್ ಜಯರಾಜ್ ಪೋಸ್ಟ್ ಡಾಲಿ ಧನಂಜಯ ಅಭಿಮಾನಿಗಳನ್ನ ಕೆರಳಿಸಿದೆ. ಈ ನಡುವೆ ಅಜೀತ್ ಜಯರಾಜ್ ಮತ್ತು ಪತ್ನಿ ಇಂಪನಾಗೆ, ಜಯರಾಜ್ ಸಹೋದರಿ ಹೇಮಾವತಿ ಕೂಡ, ಹೆಡ್ ಬುಷ್ ಸಿನಿಮಾಗೆ ಆಲ್ ದಿನ ಬೆಸ್ಟ್ ಹೇಳುವ ಮೂಲಕ ಇಂಡೈರೆಕ್ಟ್ ಟಾಂಗ್ ಕೊಟ್ಟಿದ್ದಾರೆ.




