ಹಾಸನ :- ಹೆಡ್ ಬುಷ್ ಚಿತ್ರಕ್ಕೆ ಸಂಬಂಧಿಸಿದಂತೆ ಕೇಳಿಬಂದಿದ್ದ ವಿವಾದಕ್ಕೆ ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದು ಸದ್ಯ ಈ ವಿಷಯ ಸುಖಾಂತ್ಯಗೊಂಡಿದೆ ಎಂದು ಚಿತ್ರದ ನಾಯಕ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಲನಚಿತ್ರರಂಗ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಜೊತೆಗೆ, ಸಾರ್ವಜನಿಕರು ಕೂಡ ಈ ಕ್ಷೇತ್ರದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವ ಅವಕಾಶವಿರುವುದರಿಂದ ಕೆಲ ಸಂದರ್ಭಗಳಲ್ಲಿ ಈ ರೀತಿಯ ಪರ ವಿರೋಧ ಹೇಳಿಕೆಗಳು ಕೇಳಿಬರುತ್ತದೆ.
ಅದೇ ರೀತಿ ಹೆಡ್ ಬುಷ್ ಚಿತ್ರಕ್ಕೆ ಸಂಬಂಧಿಸಿದಂತೆ ಕೇಳಿ ಬಂದ ವಿವಾದಕ್ಕೆ ಸ್ಪಷ್ಟನೆ ನೀಡಿರುವುದಲ್ಲದೆ, ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನಕ್ಕೂ ತರಲಾಗಿದೆ. ಸದ್ಯ ವಿವಾದಕ್ಕೆ ತೆರೆ ಬಿದ್ದಿದ್ದು ಚಿತ್ರ ಕೂಡ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಸಂತಸ ಹಂಚಿಕೊಂಡರು.
ಶನಿವಾರ ಮಧ್ಯಾಹ್ನ 12 ಗಂಟೆಯಿಂದ ವಿಧಾನಸಭಾ ಚುನಾವಣೆ ಕುರಿತು ಕರ್ನಾಟಕ ಟಿವಿಯಲ್ಲಿ ಮೆಗಾ ಸರ್ವೆ..
ಸಿದ್ದರಾಮಯ್ಯರ ಸೇಬು ಹಾರಕ್ಕಾಗಿ ಕಿತ್ತಾಟ, ಕಾರ್ ಮುಂದೆ ಜಮಾಯಿಸಿದ ಜನ..