Friday, December 13, 2024

Latest Posts

ಐಆರ್ ಸಿ, ಶಾರೀಕ್ ಕೃತ್ಯವನ್ನು ಸಮರ್ಥಿಸಿಕೊಂಡದ್ದರ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ

- Advertisement -

ಬೆಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ ಸಮರ್ಥಿಸಿಕೊಂಡಿದ್ದು, ಇದರ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಈ ಕೃತ್ಯದ ಕುರಿತು ಸಂಘಟನೆಯೊಂದು ಹೇಳಿಕೆ ಬಿಡುಗಡೆ ಮಾಡಿದ ನಂತರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ಹೊರಡಿಸಿದ್ದು ನಮ್ಮ ಗಮನಕ್ಕೆ ಬಂದಿದೆ ಆದರೆ ಅಲ್ಲಿರುವ ಮಾಹಿತಿಯಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲವೆಂದು ಹೇಳಿದರು.

ಚುನಾವಣಾ ಆಯುಕ್ತ ಅರುಣ್ ಗೊಯೇಲ್ ನೇಮಕಾತಿ ಕಡತವನ್ನು ಕೇಳಿದ ಸುಪ್ರೀಂಕೋರ್ಟ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದೇವೆ. ಈ ಸಂದರ್ಭದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಇಂಥಹ ಹೇಳಿಕೆಗಳನ್ನು ಬಿಡುಗಡೆ ಮಾಡಿರಬಹುದು. ಇದಕ್ಕೆ ಪ್ರತ್ಯೇಕವಾಗಿ ಇನ್ನೊಂದು ತನಿಖೆ ನಡೆಸುತ್ತೇವೆ. ಈ ಪೋಸ್ಟ್ ಎಲ್ಲಿಂದ ಪ್ರಸಾರವಾಯಿತು, ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಎಡಿಜಿಪಿ ಹೇಳಿದ್ದಾರೆ.

ಟಿವಿ ಚಾನೆಲ್ ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಟ್ರಾಯ್

- Advertisement -

Latest Posts

Don't Miss