Thursday, November 27, 2025

Latest Posts

ಯುವಕರೇ ಬೇಗ ಮದುವೆಯಾಗಿ..! ಇಲ್ಲದಿದ್ರೆ ನಿಮ್ಮ ಹೃದಯ ದುರ್ಬಲವಾಗುತ್ತೆ ಹುಷಾರ್..?!

- Advertisement -

Special story:

Feb:24: ವಿವಾಹ ಒಂದು ಮಧುರ ಬಾಂಧವ್ಯ. ಸಂಸಾರ ಸಾಗರದಲ್ಲಿ ಮಿಂದೆದ್ದ ಅನೇಕ ಹಿರಿ ಜೀವಗಳು ಇಂದಿಗೂ  ಸಂತೋಷದಿಂದ ಜೀವನ ಸಾಗಿಸುತ್ತಿದ್ಧಾರೆ. ಆದರೆ ಇತ್ತೀಚಿನ  ಆಧುನಿಕ  ಜೀವನದಲ್ಲಿ ಸಂಸಾರವೇ ಒಂದು ಜಂಜಾಟವಾಗಿಬಿಟ್ಟಿದೆ. ಅನೇಕರು ತನ್ನ ಸುಂದರ ಬದುಕನ್ನು  ಕೈಯಾರೆ ಹಾಳು  ಮಾಡುತ್ತ ಒಬ್ಬಂಟಿ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಬಂದು ಏಕಾಂಗಿ  ಜೀವನ ನಡೆಸುತ್ತಾರೆ. ಆದರೆ ಇವೆಲ್ಲವನ್ನು ನೋಡುತ್ತಾ  ಬೆಳೆಯೋ ಅದೆಷ್ಟೋ  ಪುರುಷರು ಯಾವುದೇ ಪೀಕಲಾಟಗಳು ಬೇಡವೆಂದು ಮದುವೆಯಾಗದೇ ಉಳಿದು ಸನ್ಯಾಸಿ ಜೀವನ ನಡೆಸುತ್ತಾರೆ. ಆದರೆ ಇಂತಹವರಿಗೆ ಒಂದು ಶಾಕಿಂಗ್ ಸಂಗತಿ  ನೀವು ಮದುವೆಯಾಗದೇ ಉಳಿದರೆ ನಿಮ್ಮ ಹೃದಯಕ್ಕೆ ಆಪತ್ತು ಕಟ್ಟಿಟ್ಟ  ಬುತ್ತಿ. ಪ್ರತ್ಯೇಕವಾಗಿ ಪುರುಷರು ವಿವಾಹವಾಗದೆ ಉಳಿಯಬಾರದು. ಈ ವರದಿಯೊಂದು ಹೀಗನ್ನುತ್ತಿದೆ ನೋಡಿ..

ಬೇಗ ಮದುವೆಯಾಗುವುದರಿಂದ ಪುರುಷರ ಹೃದಯದ ಆರೋಗ್ಯ ಚೆನ್ನಾಗಿರುವುದು ಹಾಗೆಯೇ ಕೆಲವು ರೋಗಗಳಿಂದಲೂ ದೂರವಿರಬಹುದು ಎಂದು ಅಧ್ಯಯನ ಹೇಳಿದೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿರುವುದು ಕಂಡು  ಬಂದಿದೆ.

ಹಿಂದಿನ ಅಧ್ಯಯನಗಳು ಮದುವೆಯಾಗಿರುವುದು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಪುರುಷರಿಗೆ ಎಂದು ಹೇಳಿದೆ. ಜೀವನ ಸಂಗಾತಿಯನ್ನು ಹೊಂದಿರುವುದು ಒಂಟಿತನವನ್ನು ಹೋಗಲಾಡಿಸುತ್ತದೆ, ಆದರೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ದಿ ಸನ್ ವರದಿಯ ಪ್ರಕಾರ, ಬ್ರಿಟನ್‌ನಲ್ಲಿ ಮದುವೆ ದರ ಕುಸಿಯುತ್ತಿದೆ. 1893 ರ ನಂತರ, 2019 ರಲ್ಲಿ ಕಡಿಮೆ ಮದುವೆಗಳು ನಡೆದಿವೆ. ಡಾ. ಲೇಬಾ ಅವರ ಅಧ್ಯಯನದಲ್ಲಿ 6800 ಜನರ ಡೇಟಾವನ್ನು ಬಳಸಲಾಗಿದೆ. ನಂತರ ಅವರು ಮತ್ತು ಅವರ ವೈವಾಹಿಕ ಸ್ಥಿತಿಯನ್ನು ಹೋಲಿಸಲಾಯಿತು. ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು ಎನ್ನಲಾಗಿದೆ. ಆದಾಗ್ಯೂ, ಮದುವೆಯ ಸ್ಥಿತಿಯು ಹೃದಯಾಘಾತದಿಂದ ಸಾಯುವ ಮಹಿಳೆಯರ ಅಪಾಯದ ಮೇಲೆ ಪರಿಣಾಮ ಬೀರಲಿಲ್ಲ ಅನ್ನೋದೆ ವಿಪರ್ಯಾಸ.

ಅತ್ತಿಗೆಯನ್ನೇ ಮದುವೆಯಾದ ನಾದಿನಿ..! ನನಗೇನೂ ಸಮಸ್ಯೆ ಇಲ್ಲ ಎಂದ ಪತಿ..?!

ಕೃಷಿಯಲ್ಲಿ ಹೊಸ ಆವಿಷ್ಕಾರ ನೀಲಿ ಬಣ್ಣದ ಗೋದಿ ಉತ್ಪಾದನೆ

ಕೇಬಲ್ ಟಿವಿ ಉದ್ಯಮಿಗಳ ಕೈ ತಪ್ಪಲಿದ್ದಾರೆ ಗ್ರಾಹಕರು…!

 

- Advertisement -

Latest Posts

Don't Miss