ಆಂಧ್ರಪ್ರದೇಶ: ಯಾರಾದರೂ ಮಂತ್ರಿ ವಿರುದ್ಧ ಕೆಟ್ಟದಾಗಿ ಮಾತಾಡಿದ್ರೆ, ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ, ಕೆಟ್ಟ ಕೆಟ್ಟ ಫೋಟೋ, ವೀಡಿಯೋ ಮಾಡಿದ್ರೆ, ಅಥವಾ ಸುಮ್ಮ ಸುಮ್ಮನೆ ಟ್ರೋಲ್ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ, ಪೊಲೀಸರಿಗೆ ದೂರು ಕೊಡೋದನ್ನ ನಾವು ನೀವು ನೋಡಿರ್ತೀವಿ. ಆದ್ರೆ ಆಂಧ್ರಪ್ರದೇಶದ ಕೆಲ ಮಹಿಳೆಯರು ಮತ್ತು ಸಿಎಂ ಜಗನ್ ಮೋಹನ್ ರೆಡ್ಡಿಯ ಬೆಂಬಲಿಗರು, ನಾಯಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.
ವಿಜಯವಾಡದ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯ ಮನೆಯ ಗೋಡೆಯ ಮೇಲೆ, ಜಗನ್ ಮೋಹನ್ ರೆಡ್ಡಿ ಫೋಟೋ ಅಂಟಿಸಲಾಗಿತ್ತು. ಅದರ ಮೇಲೆ ಜಗನ್ ಅಣ್ಣ ನಮ್ಮ ಭವಿಷ್ಯ ಎಂದು ಬರೆದಿತ್ತು. ರಾತ್ರಿ ಹೊತ್ತಲ್ಲಿ ಅದೇ ಜಾಗದಲ್ಲಿ ಓಡಾಡುತ್ತಿದ್ದ ಶ್ವಾನವೊಂದು, ಆ ಪೋಸ್ಟರನ್ನ ತನ್ನ ಬಾಯಿಯಿಂದ ಕಿತ್ತುಕೊಂಡು ಓಡಿದೆ. ಈ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಷಯ ಗೊತ್ತಾಗುತ್ತಿದ್ದಂತೆ, ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದ್ದು, ಆ ಶ್ವಾನವನ್ನ ತಕ್ಷಣ ಬಂಧಿಸಿ, ಶಿಕ್ಷೆ ನೀಡಬೇಕೆಂದು ಮನವಿ ಮಾಡಲಾಗಿದೆ.
అమరావతి :
కుక్క పై పీఎస్ లో ఫిర్యాదు…?
విజయవాడలో కుక్క పై ఓ పీఎస్ లో ఫిర్యాదు చేసిన మహిళలు.
ముఖ్యమంత్రి స్టికర్లు ఓ కుక్క తొలగించడంతో స్థానిక పీఎస్ లో ఫిర్యాదులు చేశారు.
ఫిర్యాదు తో పాటు కుక్క ముఖ్యమంత్రి వైస్ జగన్ మోహన్ రెడ్డి ఫోటో ను తొలగిస్తున్న వీడియో జత పరిచారు…… pic.twitter.com/P0CevPCVkk
— Kaza RajKumar (@KazaRajKumar) April 12, 2023
‘ರೇವಣ್ಣ ಒಂದು ಶಕ್ತಿ, ಅವರಿಂದಲೇ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಿದ್ದರು’
ಬಿಜೆಪಿಗೆ ಸೆಡ್ಡು ಹೊಡೆದ ಹೂಡಿ: ಪಕ್ಷೇತರವಾಗಿ ನಿಂತು ನಾಮಪತ್ರ ಸಲ್ಲಿಕೆ.

