ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ..

ಕರ್ನಾಟಕ ಟಿವಿ ಪ್ರಾಂತ್ಯವಾರು ಮೆಗಾ ಸರ್ವೆಯ ಪ್ರಕಾರ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ 18 ಸ್ಥಾನವನ್ನ ಗೆಲ್ಲುವ ನಿರೀಕ್ಷೆ ಇದ್ದು, 16 ಸ್ಥಾನ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಜೆಡಿಎಸ್‌ಗೆ 6 ಸ್ಥಾನ ಸಿಗಬಹುದಾಗಿದ್ದು, ಇತರೆ 1 ಸ್ಥಾನ ಪಡೆದುಕೊಳ್ಳಲಿದೆ.

ಕಲಬುರಗಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿಗೆ 5 ಸ್ಥಾನ, ಜೆಡಿಎಸ್‌ಗೆ 4 ಸ್ಥಾನ ಸಿಗುವ ನಿರೀಕ್ಷೆ ಇದೆ.

ಯಾದಗಿರಿಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. ಬಿಜೆಪಿ, ಜೆಡಿಎಸ್‌ಗೆ ತಲಾ ಎರಡೆರಡು ಸ್ಥಾನ ಸಿಗುವ ಸಾಧ್ಯತೆ ಇದೆ.

ಬೀದರ್ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರ ಬರುತ್ತದೆ. ಬಿಜೆಪಿ 2, ಕಾಂಗ್ರೆಸ್ 3, ಮತ್ತು ಜೆಡಿಎಸ್ 1 ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ.

ರಾಯಚೂರು ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದೆ. ಇಲ್ಲಿ 3 ಸ್ಥಾನವನ್ನು ಕಾಂಗ್ರೆಸ್ ಗೆದ್ದರೆ, ಬಿಜೆಪಿ, ಜೆಡಿಎಸ್ ಎರಡೆರಡು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ.

ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, 2 ಸ್ಥಾನವನ್ನು ಬಿಜೆಪಿ ಪಡೆಯಲಿದ್ದು, ಕಾಂಗ್ರೆಸ್, ಜೆಡಿಎಸ್, ಇತರೇ ತಲಾ ಒಂದೊಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ.

ಬಳ್ಳಾರಿ- ವಿಜಯನಗರ: ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ 10 ಕ್ಷೇತ್ರಗಳಿದ್ದು, 7 ಕಾಂಗ್ರೆಸ್ ಪಾಲಾಗುವ ನಿರೀಕ್ಷೆ ಇದೆ. ಮತ್ತು ಬಿಜೆಪಿಗೆ 3 ಸ್ಥಾನ ಸಿಗುವ ಸಾಧ್ಯತೆ ಇದೆ.

 

‘ನಾನು ಇಂಜಿನಿಯರ್ ಆಗಬೇಕು ಎಂಬುದು ನನ್ನ ಅಪ್ಪನ ಕನಸಾಗಿತ್ತು, ಆದರೆ… ‘

‘ಈ ಚುನಾವಣೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಗೌರವ ಉಳಿಸುವ ಚುನಾವಣೆ’

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಖೆಡ್ಡಾ ತೋಡಿದ ನಡ್ಡಾ

About The Author