ಲಖನೌ: ಉತ್ತರ ಪ್ರದೇಶದಲ್ಲೀಗ, ಉತ್ತಮ ವಾತಾವರಣವಿದೆ. ಮೊದಲಿನ ಹಾಗೆ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುವುದಿಲ್ಲ. ಗೂಂಡಾಗಿರಿ ಮಾಡಲು ಅವಕಾಶವೇ ಇಲ್ಲ. ಹಿಂದೂಗಳಂತೂ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಇದೇ ರೀತಿ ಲವ್ ಜಿಹಾದ್ ಕಥೆ ಹೊಂದಿರುವ ಸಿನಿಮಾವಾದ, ದಿ ಕೇರಳ ಸ್ಟೋರಿ ಸಿನಿಮಾಗೆ ತೆರಿಗೆ ಕೊಡಬೇಕಾಗಿಲ್ಲವೆಂದು, ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಉತ್ತರಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಟ್ಯಾಕ್ಸ್ ಫ್ರೀ ಮಾಡಲಾಗುತ್ತದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಲ್ಲದೇ ಸಂಪುಟ ಸದಸ್ಯರೊಂದಿಗೆ, ವಿಶೇಷ ಪ್ರದರ್ಶನದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ನೋಡಲಿದ್ದಾರಂತೆ ಯೋಗಿ. ಈ ಸಿನಿಮಾ ಯಾಕೆ ಟ್ಯಾಕ್ಸ್ ಫ್ರೀ ಮಾಡಲಾಗುತ್ತಿದೆ ಎಂದರೆ, ಈ ಸಿನಿಮಾದಲ್ಲಿ ಲವ್ ಜಿಹಾದ್ ಹೇಗೆ ಮಾಡಲಾಗುತ್ತದೆ. ಭಯೋತ್ಪಾದನೆ ಹೇಗೆ ಶುರುವಾಗುತ್ತದೆ ಎಂನ್ನುವ ಬಗ್ಗೆ ತೋರಿಸಲಾಗಿದೆ. ಹಾಗಾಗಿ ಇದನ್ನ ಕಂಡು ಯುವಪೀಳಿಗೆಯವರು, ಜೀವನ ಪಾಠ ಕಲಿಯಬೇಕು ಎನ್ನುವ ಕಾರಣಕ್ಕೆ, ತೆರಿಗೆ ಕಡಿತ ಮಾಡಲಾಗಿದೆ.
ಅಲ್ಲದೇ, ಉತ್ತರಪ್ರದೇಶದಲ್ಲಿ ಮತಾಂತರದ ವಿರುದ್ಧ ಕಾನೂನು ತರಲಾಗಿದೆ. ಜೊತೆಗೆ ಇಂಥ ಚಲನಚಿತ್ರವೂ ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತದೆ. ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾಗೂ ಕೂಡ ತೆರಿಗೆ ತೆಗಿಯಲಾಗಿತ್ತು. ದಿ ಕೇರಳ ಸ್ಟೋರಿ ಚಿತ್ರವನ್ನು ಕೇರಳ ಮತ್ತು ಪಶ್ಚಿಮಬಂಗಾಳದಲ್ಲಿ ಬ್ಯಾನ್ ಮಾಡಲಾಗಿದೆ.
'The Kerala Story' उत्तर प्रदेश में टैक्स फ्री की जाएगी।
— Yogi Adityanath (@myogiadityanath) May 9, 2023
‘ಮಲ್ಲಿಕಾರ್ಜುನ ಖರ್ಗೆಗೆ ನನ್ನ ಹೆಸರಲ್ಲಿ ನಕಲಿ ಪತ್ರ: ಇದು RSSನಂಥ ಕುತಂತ್ರಿಗಳ ಕೆಲಸ’