Monday, December 23, 2024

Latest Posts

‘ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ’

- Advertisement -

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದ್ರು ಕೂಡ ಹಾಸನ ಜನತೆ ನನಗೆ ಆಶೀರ್ವದಿಸಿದ್ದಾರೆ ಎಂದು ಚುನಾವಣೆ ಮುಗಿದ ನಂತರ ಹಾಸನ ಶಾಸಕ, ಪ್ರೀತಂ ಗೌಡ ತಮ್ಮ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡರು.

ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದ್ದು, ಇನ್ನಷ್ಟು ಅಭಿವೃದ್ಧಿಗೆ ಪ್ರೀತಂಗೌಡನನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಬಹುತೇಕ ಮತದಾರರು ತೀರ್ಮಾನ ಮಾಡಿದ್ದು, ಒಂದು ವರ್ಗದವರ ಬೆಂಬಲ ಕಡಿಮೆ ಇದ್ದರೂ ಉಳಿದ ವರ್ಗದ ಬಹುತೇಕ ವರ್ಗದವರು ಆಶೀರ್ವಾದ ಮಾಡಿದ್ದಾರೆ. ಚುನಾವಣೆಯ ಲೆಕ್ಕಚಾರದಲ್ಲಿ ಮತ್ತೊಮ್ಮೆ ಗೆದ್ದು ಬರುತ್ತೇನೆ. ಆಶ್ಚರ್ಯ ಬರುವ ರೀತಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪಲಿತಾಂಶದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟೀಮ್ ಬೇರೆ ಬೇರೆ ಆಗಿದ್ದು, ಚುನಾವಣೆ ವೇಳೆ ಎಲ್ಲಾ ಒಂದಾಗಿ ಅಭ್ಯರ್ಥಿ ಪರ ಎಲ್ಲಾ ನಾಯಕರು ಬಂದು ಪ್ರಚಾರದಲ್ಲಿ ಕೈಗೊಂಡಿದ್ದರು. ಯಾವ ಆರ್ಥಿಕ ಬೆಂಬಲ ಇಲ್ಲವೆಂದು ಚುನಾವಣೆ ವೇಳೆ ಹೇಳುತ್ತಿದ್ದರು. ಬಹುಶಃ ದೇಣಿಗೆ ತುಂಬ ಹೆಚ್ಚಾಗಿ ಊಗ ಉಲ್ಟವಾಗಿ ಜೆಡಿಎಸ್ ನೋಟು ಬಿಜೆಪಿಗೆ ಓಟು ಆಗಿ ಪರಿವರ್ತನೆ ಆಗಿದೆ. ಎಲ್ಲಾ ನಾಯಕರು ಇಡೀ ಕುಟುಂಬವೇ ಒಟ್ಟಿಗೆ ಬಂದು ಅನುಕಂಪದ ಅಲೆ ಪ್ರದರ್ಶಿಸಿದೆ. ಅವರು ಮಾತನಾಡಿದ ಮಾತುಗಳು, ಮಾಡಿದ ಕೆಲಸಗಳಿಗೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.

ಅಷ್ಟೊಂದು ಸವಾರಿಯನ್ನು ನನ್ನ ಮೇಲೆ ಮಾಡಿದ್ದಾರೆ. ಆದ್ರೆ ಮತದಾರರು ಯಾವುದೇ ಕಾರಣಕ್ಕೂ ಮನೆ ಮಗನಾದ ಪ್ರೀತಂಗೌಡನನ್ನು ಬಿಟ್ಟುಕೊಡಬಾರದೆಂದು ತೀರ್ಮಾನ ಮಾಡಿ ಆಶೀರ್ವಾದ ಮಾಡಿದ್ದಾರೆ. ಇನ್ನ ಹತ್ತು ಚುನಾವಣೆ ಮಾಡಿದ್ರು ಅವರು ಹತ್ತಿರಕ್ಕೂ ಬರುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಇಂತಹ ಚುನಾವಣೆಯನ್ನು ಇನು ಮೂರ‍್ನಾಲ್ಕು ಬಾರಿ ರಿಯಾಲ್ಸ್ ಮಾಡಿಕೊಂಡು ಬಂದು ಆಮೇಲೆ ಚುನಾವಣೆ ಮಾಡಿದ್ರೆ ಒಳಿತು. ನಮ್ಮ ಕಾರ್ಯಕರ್ತರು ಅಷ್ಟೊಂದು ಗಟ್ಟಿಯಾಗಿ ಉತ್ತರ ಕೊಡುವ ಮೂಲಕ ಅವರಿಗೆ ಮುಟ್ಟುವ ರೀತಿ ಮಾಡಿದ್ದಾರೆ. ಮೇ.13 ರಂದು ಪಲಿತಾಂಶ ಬಂದಮೇಲೆ ಯಾರಾರು ಎಲ್ಲೆಲ್ಲಿ ಇರುತ್ತಾರೆ, ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2018ರ ಕಳೆದ ಬಾರಿ ಚುನಾವಣೆಯಲ್ಲಿ ನಾನು ಯುವಕ ಸಕ್ರಿಯವಾಗಿದ್ದಾನೆ ಅವಕಾಶ ಕೊಟ್ಟು, ನಂಬಿಕೆ ಇಟ್ಟು ಜನತೆ ಮತವನ್ನು ಕೊಟ್ಟಿದ್ದರು. 2023ರ ಚುನಾವಣೆಯಲ್ಲಿ ಉತ್ತಮ ಕೆಲಸಗಾರನೆಂದು ಮತವನ್ನ ಕೊಡುತ್ತಾರೆ. ಯಾರು ಜನರಿಗೆ ಶೋಷಣೆ, ಬ್ಲಾಕ್‌ಮೇಲ್, ಪಾಳೆಗಾರಿಕೆ ಸಂಸ್ಕೃತಿ ಮಾಡುತ್ತಿದ್ದಾರೆ. ಅವರ ವಿರುದ್ಧ ಜಿಲ್ಲೆಯಲ್ಲಿ ರಾಜಕಾರಣ ಮಾಡಬೇಕೆಂದು ಜನರು ಅರಿತುಕೊಂಡಿದ್ದಾರೆ. ಒಮ್ಮೆಗೂ ನೋಡದವರು ಬಂದು ನೀನು ಬೆಳೆಯಬೇಕೆಂದು ಸಹಾಯ ಮಾಡಿದ್ದಾರೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ನನಗೆ ಪ್ರಥಮ ಬಾರಿಗೆ ಆಲೂರು-ಸಕಲೇಶಪುರ ಮತ್ತು ಬೇಲೂರು ಕ್ಷೇತ್ರದ ಜವಬ್ಧಾರಿಯನ್ನು ನಮ್ಮ ಪಕ್ಷದ ನಾಯಕರು ಕೊಟ್ಟಿದ್ದು, ಪ್ರಚಾರ ಮಾಡಿದ್ದು, ಎರಡು ಕ್ಷೇತ್ರದಲ್ಲೂ ನಮ್ಮ ಬಿಜೆಪಿಯವರು ಗೆಲ್ಲಲಿದ್ದಾರೆ ಎಂದ ಅವರು, ಮೇ.13ರ ವಿಧಾನಸಭಾ ಚುನಾವಣೆಯ ಪಲಿತಾಂಶದಲ್ಲಿ ಬಿಜೆಪಿ ಬಹುಮತ ಪಡೆದು ನಮ್ಮ ಪಕ್ಷದ ಶಾಸಕರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭರವಸೆ ಮಾತನಾಡಿದರು. ಸಮಿಫೈನಲ್ ಗೆದ್ದು ಫೈನಲ್ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಡೂರು ಸೇರಿ 8 ವಿಧಾನಸಭಾ ಕ್ಷೇತ್ರ ಗೆಲ್ಲಲು ಪ್ರವಾಸವನ್ನು ಪ್ರಾರಂಭ ಮಾಡಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ಮೊದಲು ನಮಗೆ ಯಾರು ಗೊತ್ತಲ್ಲ ಎಂದು ಹೇಳಿ ನಂತರ ಮತ್ತೆ ನನ್ನ ಮಗ ಸ್ವರೂಪ್ ಎಂದರು. ಈತರ ಜ್ಞಾಪಕ ಶಕ್ತಿ ಕಡಿಮೆ ಇರುವವರಿಗೆ ಹಾಸನ ಜನರು ನೆನಪು ಇಟ್ಟಿಕೊಳ್ಳುವುದು ಕಷ್ಟ ಎಂದು ಟೀಕಿಸಿದರು.

ಧರ್ಮಸ್ಥಳದಲ್ಲಿ ಮದುವೆ ಮುಗಿಸಿ, ಹಾಸನಕ್ಕೆ ಬಂದು ಓಟ್ ಮಾಡಿದ ಮಧುಮಗ

‘ಅತಂತ್ರ ಬರುವ ಪ್ರಶ್ನೆ ನಮ್ಮ‌ ಮುಂದೆ ಇಲ್ಲ, ಜೆಡಿಎಸ್ ಅಭ್ಯರ್ಥಿಗಳೇ ಗೆಲ್ಲುವುದು’

ಮತದಾನ ಮಾಡಿ, ಕಾಲಿಗೆ ಶಾಹಿ ಹಾಕಿಸಿಕೊಂಡ ವಿಶೇಷಚೇತನ ವ್ಯಕ್ತಿ..

- Advertisement -

Latest Posts

Don't Miss