ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಕೆಲ ತಿಂಗಳ ಹಿಂದಷ್ಟೇ ನಾವು ಟಿವಿಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ನೋಡಿದ್ದೆವು. ಇದೇ ರೀತಿ ಇವರಿಬ್ಬರೇ ನಟಿಸುವ ಮತ್ತೆ ಮದುವೆ ಸಿನಿಮಾ ಟೀಸರ್ ಕೂಡ ರಿಲೀಸ್ ಆಗಿತ್ತು. ಇದೀಗ ಟ್ರೇಲರ್ ಕೂಡ ರಿವೀಲ್ ಆಗಿದೆ. ನಾವು ನಿಜವಾಗಿಯೂ ನ್ಯೂಸ್‌ಗಳಲ್ಲಿ ನೋಡದ ಹಲವು ದೃಶ್ಯಗಳು, ಟ್ರೇಲರ್‌ನಲ್ಲಿ ಕಂಡು ಬಂದಿದೆ. ಆದರೆ ಇದೆಲ್ಲ ಸಿನಿಮಾಗಾಗಿ ಮಾಡಿದ ಗಿಮಿಕ್ಕಾ, ಇಲ್ಲಾ ನಿಜವಾಗಿಯೂ ನಡೆದಿರುವುದಾ ಅನ್ನೋದಕ್ಕೆ ಸಾಕ್ಷಿ ಯಾರಲ್ಲಿಯೂ ಇಲ್ಲ.
ಪವಿತ್ರಾ ಲೋಕೇಶ್, ನರೇಶ್ ಮಧ್ಯೆ ಪ್ರೀತಿ ಹೇಗೆ ಉದ್ಭವವಾಯಿತು..? ಪವಿತ್ರಾ ಮೊದಲ ಬಾರಿ ನರೇಶ್ ಮನೆಗೆ ಹೋದಾಗ, ರಮ್ಯಾ ಅವರನ್ನ ಹೇಗೆ ಬರ ಮಾಡಿಕೊಂಡಿದ್ದರು..? ಇವರಿಬ್ಬರ ಪ್ರೀತಿಗೆ ರಮ್ಯಾ ಹೇಗೆ ವಿರೋಧ ವ್ಯಕ್ತಪಡಿಸಿದ್ದರು..? ರಮ್ಯಾಗೆ ನರೇಶ್ ಏನೇನು ಕಿರುಕುಳ ನೀಡಿದ್ದರು..? ಮೈಸೂರು ಹೊಟೇಲ್‌ನಲ್ಲಿ ಪವಿತ್ರಾ- ನರೇಶ್, ರಮ್ಯಾ ಮುಂದೆ ಹೈಡ್ರಾಮಾ ಮಾಡಿದ್ದೆಲ್ಲವೂ ಈ ಸಿನಿಮಾದಲ್ಲಿ ವೀಕ್ಷಕರು ಕಾಣಲಿದ್ದಾರೆ.
ವನಿತಾ ವಿಜಯ್ ಕುಮಾರ್ ರಮ್ಯಾ ಪಾತ್ರದಲ್ಲಿ ಕಾಣಿಸಿಕೊಂಡರೆ, ಪವಿತ್ರಾ- ನರೇಶ್ ಅವರವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಜಯ ಸುಧಾ, ಶರತ್ ಬಾಬು, ಅನನ್ಯಾ ನಾಗೆಲ್ಲ, ರೋಷನ್, ರವಿವರ್ಮಾ, ಅನ್ನಪೂರ್ಣ, ಪ್ರವೀಣ್ ಯಂಡಮೂರಿ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಅತಂತ್ರ ಬರುವ ಪ್ರಶ್ನೆ ನಮ್ಮ ಮುಂದೆ ಇಲ್ಲ, ಜೆಡಿಎಸ್ ಅಭ್ಯರ್ಥಿಗಳೇ ಗೆಲ್ಲುವುದು’
‘ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ’
‘ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ’