Monday, December 23, 2024

Latest Posts

ಬಹಳ ವರ್ಷಗಳ ನಂತರ ಕುನಾಲ್ ಗಾಂಜವಾಲ ಕಂಠಸಿರಿಯಲ್ಲಿ ಮೂಡಿಬಂದಿದೆ ‘ರಿಚ್ಚಿ’ ಹಾಡು..

- Advertisement -

ಬೆಂಗಳೂರು: ನೂತನ ಪ್ರತಿಭೆ ರಿಚ್ಚಿ(ಹೇಮಂತ್ ಕುಮಾರ್) ನಾಯಕನಾಗಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ ಚಿತ್ರ “ರಿಚ್ಚಿ”. ಈಗಷ್ಟೇ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಿದೆ. ಚಿತ್ರದ ಮೊದಲ(ಕಳೆದು ಹೋಗಿರುವೆ) ಹಾಡು ಇದೇ ಮೇ 18 ರಂದು ಬಿಡುಗಡೆಯಾಗಲಿದೆ. ಗೌಸ್ ಫಿರ್ ಬರೆದಿರುವ ಈ ರೊಮ್ಯಾಂಟಿಕ್ ಹಾಡನ್ನು ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿದ್ದಾರೆ. ಬಹಳ ವರ್ಷಗಳ ನಂತರ ಕುನಾಲ್ ಅವರು ಹಾಡಿರುವ ಕನ್ನಡ ಚಿತ್ರಗೀತೆಯಿದು. ಅಗಸ್ತ್ಯ ಸಂತೋಷ್ ಸಂಗೀತ ನೀಡಿರುವ ಈ ಹಾಡಿಗೆ ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಿಚ್ಚಿ ಹಾಗೂ ರಮೋಲಾ‌ ಹೆಜ್ಜೆ ಹಾಕಿದ್ದಾರೆ.

” ರಿಚ್ಚಿ” ಲವ್ ಕಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಚಿತ್ರದ ಹಾಡುಗಳಿಗೂ ಹೆಚ್ಚಿನ ಮಹತ್ವ ನೀಡಲಾಗಿದ್ದು, ಅಗಸ್ತ್ಯ ಸಂತೋಷ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ಚಿತ್ರದ ಮೊದಲ ಹಾಡು ಮೇ ಹದಿನೆಂಟರಂದು ಬಿಡುಗಡೆಯಾಗಲಿದ್ದು, ಜೂನ್ ಅಥವಾ ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ರಿಚ್ಚಿ ತಿಳಿಸಿದ್ದಾರೆ.

ಮತ್ತೆ ಮದುವೆ ಸಿನಿಮಾ ಟ್ರೇಲರ್ ರಿಲೀಸ್: ಕೆಲವೇ ಗಂಟೆಯಲ್ಲಿ ಲಕ್ಷ ಲಕ್ಷ ವೀವ್ಸ್..

‘ದ್ವೇಶ, ಬೂಟಾಟಿಕೆಯನ್ನು ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು, ಬೆತ್ತಲೆಯಾದ ಚಕ್ರವರ್ತಿ’

ಬಟ್ಟೆ ಸರಿ ಹಾಕಿಕೊಳ್ಳದಿದ್ದರೂ, ಮಾನವೀಯತೆ ಮೆರೆದ ನಟಿಗೆ ಎಲ್ಲರಿಂದ ಶ್ಲಾಘನೆ..

- Advertisement -

Latest Posts

Don't Miss