ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆರಿಸಿ ಬಂದಿದ್ದು, ಸಿಎಂ ಪಟ್ಟವನ್ನು ಸಿದ್ದರಾಮಯ್ಯ ಅಲಂಕರಿಸಿದ್ದಾರೆ. ಕಾಂಗ್ರೆಸ್ ಪರ ಮತ ಚಲಾಯಿಸಿ ಎಂದು ಪ್ರಚಾರ ಮಾಡಿದವರಲ್ಲಿ ನಟ ಶಿವರಾಜ್‌ಕುಮಾರ್ ಮತ್ತು, ಗೀತಾ ಶಿವರಾಜ್‌ಕುಮಾರ್ ಕೂಡ ಇದ್ದರು. ತಮ್ಮ ಸಹೋದರನಾದ ಮಧು ಬಂಗಾರಪ್ಪ ಪರ ಗೀತಾ ಪ್ರಚಾರ ಕೂಡ ಮಾಡಿದ್ದರು.
ಅಲ್ಲದೇ, ಸಿದ್ದರಾಮಯ್ಯ ಪರ ಗೀತಾ ಮತ್ತು ಶಿವಣ್ಣ ಪ್ರಚಾರ ಮಾಡಿದ್ದು, ಇದಕ್ಕಾಗಿ ಅವರಿಗೆ ಧನ್ಯವಾದ ಹೇಳಲು, ಇಂದು ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸೂರ್ಜೆವಾಲ, ಶಿವರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿದ್ದರು. ಇಬ್ಬರೂ ಉಭಯ ಕುಶಲೋಪರಿ ಮಾತನಾಡಿದ್ದು, ರಣ್ದೀಪ್ ಶಿವರಾಜ್‌ಕುಮಾರ್ ದಂಪತಿಗೆ ಪ್ರಚಾರ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಶಿವರಾಜ್‌ಕುಮಾರ್, ಆತ್ಮೀಯರಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ್ ರವರು ತಮ್ಮ ಬಿಡುವಿಲ್ಲದ ವೇಳೆಯಲ್ಲಿಯೂ ಸಮಯ ಮಾಡಿಕೊಂಡು ಕೃತಜ್ಞತೆ ತಿಳಿಸಲು ನಮ್ಮ ಮನೆಗೆ ಆಗಮಿಸಿದಕ್ಕೆ ನನ್ನ ಪತ್ನಿ ಗೀತಾ ಮತ್ತು ನನ್ನ ಪರವಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆತ್ಮೀಯರಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ್ ರವರು ತಮ್ಮ ಬಿಡುವಿಲ್ಲದ ವೇಳೆಯಲ್ಲಿಯೂ ಸಮಯ ಮಾಡಿಕೊಂಡು ಕೃತಜ್ಞತೆ ತಿಳಿಸಲು ನಮ್ಮ ಮನೆಗೆ ಆಗಮಿಸಿದಕ್ಕೆ ನನ್ನ ಪತ್ನಿ ಗೀತಾ ಮತ್ತು ನನ್ನ ಪರವಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
— DrShivaRajkumar (@NimmaShivanna) May 23, 2023
‘ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ದೇವೇಗೌಡ ಅವರು ಇಟ್ಟ ಪ್ರತೀ ಹೆಜ್ಜೆಗಳು ನಮಗೆ ಒಂದು ಪಾಠ’