ಹಾಸನ: ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಚರಣೆಯಲ್ಲಿ ಸುಮಾರು 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡು ವಾರಸ್ತುದಾರರಿಗೆ ವಾಪಸ್ ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ವಿವಿಧ ರೀತಿಯಲ್ಲಿ ಸಾರ್ವಜನಿಕರು ಕಳೆದುಕೊಂಡ ಇಲ್ಲವೇ ಕಳ್ಳತನವಾಗಿರುತ್ತದೆ. ಇಂತಹ ಮೊಬೈಲ್ ಗಳ ಪತ್ತೆ ಹಚ್ಚಲು ಮೊಬೈಲ್ ಸಂಖ್ಯೆ ೮೨೭೭೯೫೯೫೦೦ ವಾಟ್ಸಾಪ್ ಗೆ ಹಾಯ್ ಎಂದು ಮೆಸೆಜು ಕಳುಹಿಸಿದರೇ ಸಾಕು ಒಂದು ಲಿಂಕ್ ವಾಪಸ್ ಬರುತ್ತದೆ. ಅದನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಅಪ್ಲಿಕೇಶನ್ ಸೌಲಭ್ಯ ಸಿಗುತ್ತದೆ. ಮೊಬೈಲ್ ಕಳೆದುಕೊಂಡವರು ೨೦೨೩ ಏಪ್ರಿಲ್ ೨೫ ರಿಂದ ಇಲ್ಲಿವರೆಗೂ ಈ ಅಪ್ಲಿಕೇಶನ್ ಉಪಯೋಗಿಸಿದ ಹಾಸನ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು ೩೬೫ ರಿಕ್ವೆಸ್ಟ್ ಗಳು ಬಂದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯವರು ಗಮನಹರಿಸಿದ್ದಾರೆ ಎಂದರು. ಇಲ್ಲಿಯವರೆಯಿಂತಹ ಲಿಂಕ್ ಉದ್ಘಾಟನೆಯಾಗಿ ಇಲ್ಲಿಯವರೆಗೂ ವಿವಿಧ ಪೊಲೀಸ್ ಠಾಣೆಯವರು ಹಾಗೂ ಸಾರ್ವಜನಿಕರು ೧೪೧೮ ಮೊಬೈಲ್ಗಳ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಇದುವರೆಗೂ ೧೪೮ ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ. ಈಗಾಗಲೆ ೨೨ ಮೊಬೈಲ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಗಿದೆ. ಎಲ್ಲಾ ಮೊಬೈಲ್ ಗಳನ್ನು ದೇಶದ ವಿವಿಧ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದಾಧ್ಯಂತ ನಾನಾ ಜಿಲ್ಲೆಗಳಿಂದ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಒಟ್ಟು ೧೪೮ ಮೊಬೈಲ್ ಗಳ ಪೈಕಿ ಕಂಪನಿಗಳಾದ ವಿವೋ-೭೪ ಮೊಬೈಲ್, ಸಾಮ್ ಸಾಂಗ್-೨೫, ರೆಡ್ಮಿ-೩೩, ಒನ್ ಪ್ಲಸ್-೧೧, ಹಾನರ್-೨, ನೋಕಿಯಾ-೩ ಕಂಪನಿಯಗಳಾದಾಗಿದೆ. ಸಿಯರ್ ಪೋರ್ಟಲ್ ಟ್ರ್ಯಾಕ್ ಆಗಿರುವ ೧೨೩ ಮೊಬೈಲ್ ಗಳ ಬಗ್ಗೆ ಮಾಹಿತಿ ಇದ್ದು, ಪತ್ತೆಗಾಗಿ ಪ್ರಯತ್ನ ಮುಂದುವರೆಸಲಾಗಿದೆ ಎಂದರು. ssಸಿಯರ್ ಪೋರ್ಟಲ್ ಮೂಲಕ ಮೊಬೈಲ್‌ಗಳ ಪತ್ತೆಗಾಗಿ ಶ್ರಮಿಸಿದ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಪೀರ್ ಖಾನ್ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಇದೆ ವೇಳೆ ಶ್ಲಾಘಿಸಿದರು.
ಹಾಸನ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ನೇತೃದಲ್ಲಿತ್ವದಲ್ಲಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆಗೆ ಬರೊಬ್ಬರಿ ೧೪೮ ಮೊಬೈಲ್ ಫೋನ್ ದಸ್ತಗಿರಿ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ ದಾಖಲಾದ ದೂರುಗಳ ಬೆನ್ನತ್ತಿದ ಕಾರ್ಯಾಚರಣೆಯಾಗಿದ್ದು, ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿಯಾಗಿದ್ದ ದೂರುಗಳು ಆಗಿದೆ. ರಾಜ್ಯ ಹೊರ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಮೊಬೈಲ್ ವಶಪಡಿಸಿಕೊಳಲಾಗಿದೆ. ಕಳೆದುಕೊಂಡ ಮೊಬೈಲ್ ಮಾಲೀಕರು ವಾಪಾಸ್ ಪಡೆದು ಸಂತಸ ವ್ಯಕ್ತಪಡಿಸಿದರು.
ಇದೆ ವೇಳೆ ಡಿವೈಎಸ್ಪಿ ಮಂಜುನಾಥ್, ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಇತರರು ಉಪಸ್ಥಿತರಿದ್ದರು.
ಚಾಲಕರ ಸಮಸ್ಯೆ ಆಲಿಸುತ್ತ, ಟ್ರಕ್‌ನಲ್ಲಿ ಸಂಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ..
ಪಾಕೀಕರಣ ಬಿತ್ತುವ ವಿದ್ರೋಹಿಗಳಿಗೆ ‘ ಕೇಸರಿ’ ದುಃಸ್ವಪ್ನದ ಅಸ್ತ್ರ: ಡಿಕೆ ವಿರುದ್ಧ ವಿಜಯೇಂದ್ರ ಗರಂ..