Saturday, July 5, 2025

Latest Posts

ಹಾಡುಗಳ ಮೂಲಕ ಕಲಾರಸಿಕರ ಮನ ಗೆದ್ದ “ರೋಡ್ ಕಿಂಗ್” .

- Advertisement -

Movie News: ಮತೀನ್ ಹುಸೇನ್ ನಾಯಕರಾಗಿ ನಟಿಸಿರುವ `ರೋಡ್ ಕಿಂಗ್’ ಚಿತ್ರದ ಮೂರು ಹಾಡುಗಳು trendsetter productions ಯೂಟ್ಯೂಬ್ ಚಾನಲ್ ನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಕಲಾರಸಿಕರ ಮನ ಗೆದ್ದಿದೆ. ಪ್ರಭು ಎಸ್ ಆರ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚಂದನ್ ಶೆಟ್ಟಿ ಮಾಧುರಿ ಹಾಗೂ ವಿಶಾಲ್ ಹಾಡಿದ್ದಾರೆ. ಡಾ||ವಿ.ನಾಗೇಂದ್ರ ಪ್ರಸಾದ್, ಮತೀನ್ ಹುಸೇನ್ ಹಾಗೂ ಸಾಯಿ ನವೀನ್ ಹಾಡುಗಳನ್ನು ಬರೆದಿದ್ದಾರೆ. ಟ್ರೇಲರ್ ಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಜೂನ್ 23 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ದಿಲೀಪ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಮತೀನ್ ಹುಸೇನ್ ಕಥೆ ಬರೆದಿದ್ದು, ರಾಂಡಿ ಕೆಂಟ್ ನಿರ್ದೇಶನ ಮಾಡಿದ್ದಾರೆ. ಮತೀನ್ ಹುಸೇನ್, ಮಹೇಶ್ ಅವರ ಜೊತೆಗೂಡಿ ಸಂಭಾಷಣೆ ಬರೆದಿದ್ದಾರೆ.

ರಾಂಡಿ ಕೆಂಟ್ ಹಾಗೂ ಮತೀನ್ ಹುಸೇನ್ ಸ್ನೇಹಿತರು. ಅಮೇರಿಕಾದಲ್ಲಿರುವ ರಾಂಡಿ ಅವರು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ವಿಶೇಷ.

ನಾಯಕಿಯಾಗಿ `ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದಾರೆ. ಲೀಲಾ ಮೋಹನ್, ಹರೀಶ್ ಕುಮಾರ್, ಸುಮಾ ರಾವ್, ನಯನಾ ಶೆಟ್ಟಿ, ಭುವನ್ ರಾಜ್, ರಿಜ್ವಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಆರಿಫ್ ಲಲಾನಿ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಈ ಚಿತ್ರಕ್ಕಿದೆ.

ಆದಿಪುರುಷ್ ಚಿತ್ರದ ವಿತರಣೆಯ ಹಕ್ಕು ಪಡೆದ ಕೆ.ಆರ್.ಜಿ.ಸ್ಟುಡಿಯೋಸ್

ಮರಿ ಟೈಗರ್- ಸೌಂದರ್ಯ ಜಯಮಾಲಾ ಭೇಟಿ, ಬಾಲ್ಯದ ದಿನಗಳಿಗೆ ಜಾರಿದ ಅಣ್ಣ ತಂಗಿ..!

“ರೇವ್ ಪಾರ್ಟಿ” ಚಿತ್ರೀಕರಣ ಮುಕ್ತಾಯ: ಆಗಸ್ಟ್ ನಲ್ಲಿ ಬಿಡುಗಡೆ

- Advertisement -

Latest Posts

Don't Miss