ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಸರಳತೆ ಮೆರೆದ ಶಿರಹಟ್ಟಿ ಶಾಸಕ..

Gadag News: ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಇಲ್ಲಿನ ಮೇಗೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ, ಬಿಸಿಯೂಟ ಸೇವನೆ ಮಾಡಿದ್ದಾರೆ. ಈ ಮೂಲಕ ಸರಳತೆ ಮೆರೆದಿದ್ದಾರೆ.

ಇಂದು ಶಾಸಕರು ಶಾಲೆಗೆ ಆಗಮಿಸಿದ್ದು, ಮಕ್ಕಳೆಲ್ಲ ಸಾಲಾಗಿ ನಿಂತು ಶಾಸಕರಿಗೆ ವೆಲ್‌ಕಮ್ ಮಾಡಿದ್ದಾರೆ. ಇದಾದ ಬಳಿಕ, ಶಾಲಾ ಶಿಕ್ಷಕರು, ಮಕ್ಕಳೊಂದಿಗೆ ಕೆಲ ಸಮಯ ಕಳೆದ ಶಾಸಕರು,ಬಿಸಿಯೂಟ ಕೋಣೆಗೆ ತೆರಳಿ, ಅಡಿಗೆ ಸಿಬ್ಬಂದಿಗೆ ಮೆನು ಬಗ್ಗೆ ಕೇಳಿದ್ದಾರೆ.

ಇಂದು ಬುಧವಾರವಾದ ಕಾರಣ, ಪಲಾವ್ ಮಾಡಲಾಗಿದ್ದು, ಶಾಲಾ ಆವರಣದಲ್ಲೇ ಮಕ್ಕಳೊಂದಿಗೆ ಶಾಸಕ ಡಾ.ಚಂದ್ರು ಬಿಸಿಯೂಟ ಸೇವಿಸಿದ್ದಾರೆ. ಜೊತೆಗೆ ಶಾಲೆಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

‘ಯಾರಿಗೂ ಗೊತ್ತಿಲ್ಲದಂತೆ ಟೋಲ್ ದರ ಏರಿಸಿರುವುದು ಅನ್ಯಾಯದ ಪರಮಾವಧಿ’

‘ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಕೊಡ್ತೀವಿ ಅಂತಿದ್ದಾರೆ ಸರ್, ದಯವಿಟ್ಟು ಹುಡುಗಿ ಹುಡುಕಿಕೊಡಿ’

‘ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ಸೆಂಟರ್‌ಗಳನ್ನ ಬಿಜೆಪಿಯಿಂದ ತೆರೆಯುತ್ತೇವೆ’

About The Author