Thursday, July 25, 2024

Latest Posts

‘ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ಸೆಂಟರ್‌ಗಳನ್ನ ಬಿಜೆಪಿಯಿಂದ ತೆರೆಯುತ್ತೇವೆ’

- Advertisement -

Kolar Political News: ಕೋಲಾರ : ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ಸರ್ಕಾರಜ ಗ್ಯಾರಂಟಿ ಯೋಜನೆಗಳ ಕುರಿತು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಟೋಪಿ ಹಾಕಿದೆ. ಕಳೆದ 60 ವರ್ಷಗಳಿಂದ ಹಾಕಿದ ಟೋಪಿ ಮತ್ತೊಮ್ಮೆ ಹಾಕಿದೆ. ಜನರಿಗೆ ಕಾಂಗ್ರೆಸ್‌ನವರು ಟೋಪಿ ಹಾಕೋದು ಮೈಗೂಡಿಸಿಕೊಂಡಿದ್ದಾರೆ. ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮುನಿಸ್ವಾಮಿ ಕಿಡಿಕಾರಿದ್ದಾರೆ.

ಅಲ್ಲದೇ, ಎಲ್ಲಾ ವರ್ಗದ ಕುಟುಂಬಗಳ ಪ್ರತಿ ಸದಸ್ಯನಿಗೆ ೧೦ ಕೆಜಿ ಅಕ್ಕಿ ಕೊಡ್ತೇವೆ ಅಂತ ಹೇಳಿದ್ರು. ಎಪಿಎಲ್, ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಕೊಡ್ತೇವೆ ಅಂತ ಹೇಳಿಲ್ಲ. ಒಂದು ಸಾವಿರ ಚದರಡಿ ಮನೆ ಇರಬಾರದು ಎಂದು ಅನೇಕ ಕಂಡೀಂಷನ್ಸ್ ಹಾಕ್ತಿದ್ದಾರೆ.  ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅನ್ ಲೈನ್ ಸೆಂಟರ್ ಗಳನ್ನ  ಬಿಜೆಪಿಯಿಂದ ತೆರೆಯುತ್ತೇವೆ ಎಂದು ಮುನಿಸ್ವಾಮಿ ಹೇಳಿದ್ದಾರೆ.

ಇನ್ನು, ಸುರ್ಜೇವಾಲ ಖಾಸಗಿ ಹೋಟೆಲ್ ನಲ್ಲಿ ಬಿಬಿಎಂಪಿ ಅಧಿಕಾರಗಳ ಸಭೆ ನಡೆಸಿದ ಕುರಿತು ಮಾತನಾಡಿದ ಮುನಿಸ್ವಾಮಿ, ಬಿಜೆಪಿ‌ ಸರ್ಕಾರ ಇದ್ದಾಗ ದೆಹಲಿಗೆ ಎಟಿಎಂ ಅಂತ ಆರೋಪ ಮಾಡ್ತಿದ್ದರು. ಆದ್ರೆ ಎಂದಿಗೂ ಬಿಜೆಪಿ ಪಕ್ಷದ ರಾಷ್ಡ್ರೀಯ ಅಧ್ಯಕ್ಷರು ಐಎಎಸ್ ಅಧಿಕಾರಿಗಳನ್ನು ಸೇರಿಸಿ ಸಭೆ ಮಾಡಿಲ್ಲ. ಡಿಕೆಶಿ, ಜಾರ್ಜ್ ಜಮೀರ್ ಅಹ್ಮಖಾದ್ ಖಾನ್ , ಸುರ್ಜಿವಾಲರನ್ನು ಬೆಂಗಳೂರಿಗೆ ಕರೆಸಿದ್ದಾರೆ. ಬೆಂಗಳೂರಿನಿಂದ ಎಷ್ಟು ದುಡ್ಡು ಬರಬೇಕು ಅಂತ ಮೀಟಿಂಗ್ ಮಾಡಿದ್ದಾರೆ.  ಇವರಿಗೆ ನಾಚಿಕೆ ಆಗಬೇಕು, ಸರ್ಕಾರವನ್ನು ದುರುಪಯೋಗ  ಮಾಡಿಕೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಪಕ್ಷದ ಸಭೆ ಇದ್ದಲ್ಲಿ ಪ್ರೈವೈಟ್ ಆಗಿ ಇಟ್ಟುಕೊಳ್ಳಬೇಕು. ಅಧಿಕಾರಿಗಳನ್ನು ಸೇರಸಿ ಸಭೆ ಮಾಡಬಾರದಿತ್ತು.ಇದಕ್ಕೆ ಸಿದ್ದರಾಮಯ್ಯ ಡಿಕೆಶಿ ಕರ್ನಾಟಕ ಜನತೆಗೆ ಕ್ಷಮೆ ಕೇಳಬೇಕು ಎಂದು ಮುನಿಸ್ವಾಮಿ ಆಗ್ರಹಿಸಿದ್ದಾರೆ.

ಕರ್ನಾಟಕದ ಎಟಿಎಂ ಅನ್ನ ಬಳಸಿಕೊಂಡು ದೆಹಲಿಗೆ ಹಣ ಕಳುಹಿಸಲು ಕಾಂಗ್ರೆಸ್ ನವರು ಮುಂದಾಗಿದ್ದಾರೆ. ದೇಶದ ಸಂಪತ್ತನ್ನು ಲೂಟಿ ಮಾಡಿ ಬೇರೆ ಬೇರೆ ದೇಶದಲ್ಲಿ ಆಸ್ತಿಗಳನ್ನು ಕಾಂಗ್ರೆಸ್ಸಿನವರು ಮಾಡಿದ್ದಾರೆ. ಇದು ಪುನರಾವರ್ತನೆ ಆದ್ರೆ ರಾಜ್ಯ ಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಮುನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿದ್ಯುತ್ ದರ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುನಿಸ್ವಾಮಿ, ಕಾಂಗ್ರೆಸ್‌ನವರ ಗ್ಯಾಂರೆಂಟಿ ಯೋಜನೆಗಳನ್ನ ತಲುಪಿಸಲು ವಿದ್ಯುತ್ ದರ ಏರಿಸಿದ್ದಾರೆ . ಬಿಜೆಪಿ ಸರ್ಕಾರ ಇದ್ದಾಗ ವಿದ್ಯುತ್ ದರ ಏರಿಸಿದ್ದೇವೆ ಅನ್ನೋದನ್ನ ಅವರು ಮನಃ ಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಲಿ. ನಮ್ಮ ಸರ್ಕಾರ ಇದ್ದಾಗ ಯಾವುದೇ ರೇಟ್ಸ್ ಹೆಚ್ಚಿಸಿಲ್ಲ. ಬಿಎಂಟಿಸಿ ಕೆಎಸ್ ಆರ್ ಟಿಸಿ ಬಸ್  ಹಾಗೂ ಅಕ್ಕಿ ಕೋಡೋದಕ್ಕೆ ದುಡ್ಡು ಕಟ್ಟಬೇಕು ಅಂತ  ಬಿಜೆಪಿಯ ಮೇಲೆ ಕಾಂಗ್ರೆಸ್ ನವರು ಗೂಬೆ ಕೂರಿಸ್ತಿದ್ದಾರೆ ಎಂದು ಮುನಿಸ್ವಾಮಿ ಆರೋಪಿಸಿದ್ದಾರೆ.

ನೀವು ಕೊಟ್ಟಿರುವ ಆಶ್ವಾಸನೆಗಳಿಂದ ಆಡಳಿತ ನಡೆಸ್ತಿದ್ದೀರಾ  ನಿಮಗೆ  ಭವಿಷ್ಯತ್ ಇಲ್ಲ. ಮುಂದಿನ ದಿನಗಳಲ್ಲಿ ದೇಶದ ೫ ರಾಜ್ಯಗಲ್ಲಿ ನಡೆಯುವ ಚುನಾವಣೆಗೆ  ಕರ್ನಾಟಕ ಸರ್ಕಾರದ ಹಣವನ್ನ ದುರುಪಯೋಗ ಪಡಿಸಿಕೊಳ್ಳಲು ಕರ್ನಾಟಕ ರಾಜ್ಯವನ್ನು ಎಟಿಎಂ ಹಾಗೇ ಬಳಸಿಕೊಳ್ಳಲು ಕಾಂಗ್ರೆಸ್ ನವರು ಮುಂದಾಗಿದ್ದಾರೆ .ಇದಕ್ಕೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರನ್ನು ಕೊಡ್ತಾರೆ.  ಒಂದು ಯೂನಿಟ್ ಗೆ ೭೦ ಪೈಸೆ ಹೆಚ್ಚಿಸಿದ್ದಾರೆ ,ಆರ್ ಆರ್ ನಂಬರ್ ಒಂದೇ ಇರಬೇಕು ಎಂಬ ಕಂಡೀಷನ್ ಹಾಕಿದ್ದಾರೆ. ಇಂಡಸ್ಡ್ರೀಯಲ್ ಪ್ರದೇಶಗಳಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದಾರೆ . ಅವರ ಬಳಿ ೪೦% ಹಣ ಕೇಳಿ ಹಣ ಕೊಡದೇ ಇರೋದಕ್ಕೆ ಮುಚ್ಚಿ ಪ್ರತಿಭಟನೆಗಳನ್ನ ಮಾಡ್ತಿದ್ದಾರೆ.  ಕಾಂಗ್ರೇಸ್ ಬಂದ ಒಂದೇ ತಿಂಗಳಿಗೆ  ಗ್ಯಾರೆಂಟಿ ಯೋಜನೆಗಳು ಜನರ ಮುಂದೆ ಹುಸಿಯಾಗಿದೆ.  ಅವರು ಮಾಡಿರುವ ತಪ್ಪುಗಳನ್ನು  ಮರೆಮಾಚಿಕೊಳ್ಳಲು ಬಿಜೆಪಿ ಮೇಲೆ ಆರೋಪಗಳನ್ನು ಮಾಡ್ತಿದ್ದಾರೆ. ಡಿಕೆಶಿ ಒಂದು ಕಡೆ ಮುಖ್ಯಮಂತ್ರಿಯಾಗಬೇಕು ಅಂತ ಇದ್ರು, ಆಗಲಿಲ್ಲ. ಅದಕ್ಕೆ ಡಿಕೆಶಿ ಯಾವುವೇ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಡಿಕೆಶಿ ಮುಖದಲ್ಲಿ ಮಂದಹಾಸವೇ ಇಲ್ಲ ಎಂದು ಮುನಿಸ್ವಾಮಿ ವ್ಯಂಗ್ಯವಾಡಿದ್ದಾರೆ.

ನೆಹರೂ ಕ್ರೀಡಾಂಗಣದಲ್ಲಿ ಪಾಲಿಕೆ ಆಯುಕ್ತರಿಂದ ಭರ್ಜರಿ ಬ್ಯಾಟಿಂಗ್, ಶಾಸಕ ತೆಂಗಿನಕಾಯಿ ಟೆಂಗಿನಕಾಯಿ ಸಾಥ್

ಬಾಗೇಪಲ್ಲಿ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 9 ನಿರ್ದೇಶಕರ ಗೆಲುವು: ಅಭಿನಂದನಾ ಸಮಾರಂಭ

ಪತ್ರ ಬರೆಯುವ ಮೂಲಕ ಅವಿವಾ ಮತ್ತು ಅಭಿಷೇಕ್‌ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

- Advertisement -

Latest Posts

Don't Miss